ಕರ್ನಾಟಕ

karnataka

ETV Bharat / state

ಸಂಘ ನಿರ್ಧರಿಸಿದರೂ ದರ ಏರಿಕೆಗೆ ಹೋಟೆಲುಗಳ ಹಿಂದೇಟು: ಕಾರಣ? - ದರ ಹೆಚ್ಚಳ

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಊಟ, ತಿಂಡಿಗಳ ಬೆಲೆ ಹೆಚ್ಚಳ ಮಾಡುವುದಾಗಿ ರಾಜ್ಯ ಹೋಟೆಲ್ ಮಾಲೀಕರ ಸಂಘ ಪ್ರಕಟಣೆ ನೀಡಿತ್ತು. ಅಲ್ಲದೆ, ನಿನ್ನೆಯಿಂದಲೇ ಹೊಸ ದರ ಜಾರಿಗೆ ತರಲಾಗಿತ್ತು. ಆದ್ರೆ ಪೆಟ್ರೋಲ್​, ಡಿಸೇಲ್​ ದರ ಇಳಿಕೆಯಂತೆ ಗ್ಯಾಸ್​ ದರ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಹೋಟೆಲ್​ ಮಾಲೀಕರು ದರ ಹೆಚ್ಚಳಕ್ಕೆ ಕಾದು ನೋಡುವ ತಂತ್ರ ಬಳಸಿದ್ದಾರೆ.

karnataka-hotel-food-price-hike
ದರ ಏರಿಕೆ

By

Published : Nov 9, 2021, 10:14 AM IST

ಬೆಂಗಳೂರು: ಸೋಮವಾರದಿಂದಲೇ ಗ್ರಾಹಕರಿಗೆ ಹೋಟೆಲ್ ತಿಂಡಿ ತಿನಿಸಿನ ದರ ಹೆಚ್ಚಳವಾಗಬಹುದಾಗಿದ್ದ ನಿರೀಕ್ಷೆ ಹುಸಿಯಾಗಿದೆ. ಹೋಟೆಲ್ ಸಂಘ ದರ ಏರಿಕೆಗೆ ನಿರ್ಧರಿಸಿದ್ದರೂ, ಬಹುತೇಕ ಹೋಟೆಲ್​ಗಳು ದರ ಏರಿಕೆ ಮಾಡಲು ಹಿಂದೇಟು ಹಾಕಿವೆ.

ತಿಂಡಿ, ಊಟ ಸೇರಿದಂತೆ ಚಹಾ ಕಾಫಿಗಳ ಬೆಲೆಯಲ್ಲಿ ಶೇ.5 ರಿಂದ 10 ರವರೆಗೂ ಏರಿಕೆ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಪ್ರಕಟಣೆ ನೀಡಿತ್ತು. ವಾಣಿಜ್ಯ ಅಡುಗೆ ದರ ಹೆಚ್ಚಳ, ದಿನಸಿ, ತರಕಾರಿ ಬೆಲೆ ಏರಿಕೆ ಹಿನ್ನೆಲೆ ಊಟ, ತಿಂಡಿಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು. ಆದರೆ ಕೆಲವು ಹೋಟೆಲ್ ಮಾತ್ರ ನಿನ್ನೆಯಿಂದಲೇ ಹೊಸ ದರ ಜಾರಿಗೆ ತಂದಿದ್ದು, ಬಹುತೇಕ ದರ್ಶಿನಿ, ಸಣ್ಣಪುಟ್ಟ ಹಾಗೂ ಸ್ಟಾರ್ ಹೋಟೆಲ್​ಗಳು ಒಂದೆರಡು ವಾರ ಕಾದು ನೋಡಲು ಮುಂದಾಗಿವೆ.

ಕೋವಿಡ್ ಹಿನ್ನೆಲೆ ಲಾಕ್ ಡೌನ್ ಬಳಿಕ ಮತ್ತೆ ಗ್ರಾಹಕರು ಬಂದು ಉದ್ಯಮ ಚೇತರಿಸಿಕೊಳ್ಳಲು ಇಷ್ಟು ಸಮಯ ಬೇಕಾಗಿತ್ತು. ಈಗ ಮತ್ತೆ ದರ ಹೆಚ್ಚಳ ಮಾಡಿದರೆ ಗ್ರಾಹಕರ ಕೊರತೆ ಹೆಚ್ಚಾಗಬಹುದು ಎಂಬ ಆತಂಕ ಹೋಟೆಲ್​ ಮಾಲೀಕರನ್ನು ಕಾಡಿದೆ. ಜೊತೆಗೆ ಪೆಟ್ರೋಲ್ ಬೆಲೆಯಿಳಿಕೆ ಆದಂತೆ ಎಲ್​ಪಿಜಿ ದರದಲ್ಲೂ ಇಳಿಕೆಯಾಗಬಹುಬ ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ ತಿನಿಸುಗಳ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ. ಆದರೆ ಹೆಚ್ಚಿಸುವುದು ಬಿಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟಿದ್ದು ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ತಿಳಿಸಿದ್ದಾರೆ.

ABOUT THE AUTHOR

...view details