ಕರ್ನಾಟಕ

karnataka

ETV Bharat / state

ಪುನೀತ್​​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ರಜನೀಕಾಂತ್-ಎನ್​ಟಿಆರ್ ಭಾಗಿ ಬಗ್ಗೆ ಮುನಿರತ್ನ ಹೇಳಿಕೆ - Karnataka Ratna ceremony

ದಿ.ಪುನೀತ್​​ ಅವರಿಗೆ ಇಂದು ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಜನೀಕಾಂತ್ ಹಾಗೂ ಎನ್​ಟಿಆರ್ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. ​

Munirathna raection about supers stars
Munirathna raection about supers stars

By

Published : Nov 1, 2022, 1:08 PM IST

ಕೋಲಾರ:ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಹಾಗೂ ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್​ಟಿಆರ್​ ಭಾಗಿಯಾಗುತ್ತಿರುವುದು ಖುಷಿ ತಂದಿದೆ ಎಂದು ಸಚಿವ ಮುನಿರತ್ನ ಹೇಳಿದರು.

ಮಧ್ಯಾಹ್ನ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಟರು ಆಗಮಿಸಿದ್ದು, ಅವರನ್ನು ಸ್ವಾಗತಿಸುವ ಜವಾಬ್ದಾರಿ ನನ್ನದು. ಸಂಜೆ 4 ಗಂಟೆಗೆ ಗಣ್ಯರನ್ನು ವಿಧಾನಸೌಧಕ್ಕೆ ಕರೆತರಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೂಪರ್​ ಸ್ಟಾರ್​ಗಳಿಬ್ಬರೂ ಕನ್ನಡದಲ್ಲಿಯೇ ಮಾತನಾಡಲಿದ್ದಾರೆ. 67ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ನಮಗೆ ಇದೊಂದು ಸುದಿನ. ಕಾರ್ಯಕ್ರಮ ಮುಗಿಯುವವರೆಗೂ ನಾನು ಅವರ ಜೊತೆಯಲ್ಲಿಯೇ ಇರಲಿದ್ದೇನೆ ಎಂದರು.

ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಕ್ಕಿಂತ, ಅವರು ನಮ್ಮನ್ನು ಅಗಲಿರುವುದು ತುಂಬಾ ನೋವಿನ ವಿಚಾರ. ಈ ಹಿಂದೆ ಡಾ.ರಾಜ್​​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಇದೀಗ ಮತ್ತೆ ಅದೇ ಕುಟುಂಬದಲ್ಲಿ ಪುನೀತ್ ಅವರಿಗೆ ಪ್ರಶಸ್ತಿ ಸಲ್ಲುತ್ತಿದೆ. ಸರ್ಕಾರದ ವತಿಯಿಂದ ಮೇರುನಟನ ಕುಟುಂಬದ ಇಬ್ಬರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಹೆಗ್ಗಳಿಕೆ ಎಂದು ಸಚಿವ ಮುನಿರತ್ನ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ

ABOUT THE AUTHOR

...view details