ಕರ್ನಾಟಕ

karnataka

ETV Bharat / state

ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ: ಕೆ.ಆರ್.ರಮೇಶ್​ ಕುಮಾರ್​ ವ್ಯಂಗ್ಯ

ನಾವು ಬದುಕುತ್ತಿರುವುದು ಕುಮಾರಸ್ವಾಮಿ ಅವರ ಕೃಪೆಯಿಂದ. ರಾಜ್ಯದಲ್ಲಿನ ಬಹುತೇಕ ಯೋಜನೆಗಳು ಅವರದೇ ಎಂದು ಒಪ್ಪಿಕೊಳ್ಳುವುದಾಗಿ ಕೋಲಾರದ ಯರಗೋಳ್ ಜಲಾಶಯಕ್ಕೆ ಭೇಟಿ ನೀಡಿದ್ದಾಗ ಕೆ.ಆರ್.ರಮೇಶ್​ ಕುಮಾರ್​ ವ್ಯಂಗ್ಯವಾಡಿದರು.

Etv Bharatk-r-ramesh-kumar
ಕೆ ಆರ್​ ರಮೇಶ್​ ಕುಮಾರ್​

By

Published : Aug 5, 2022, 9:58 PM IST

ಕೋಲಾರ :ನರಗಳ ದೌರ್ಬಲ್ಯ ಇದ್ದಾಗ ಮಕ್ಕಳಾಗೋದು ವಿಳಂಬವಾಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಬಗ್ಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಬಾಗಿನ ಅರ್ಪಿಸಿದರು.

ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗೋದು ವಿಳಂಬವಾಗುತ್ತೆ

ರಮೇಶ್ ಕುಮಾರ್​ರನ್ನು ಸ್ವಯಂಘೋಷಿತ ಭಗೀರಥ ಎಂದು ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದರು. ಡ್ಯಾಂನಲ್ಲಿ ನೀರು ಶೇಖರಣೆಯಾದರೂ ಸಾರ್ವಜನಿಕ ಬಳಕೆಗೆ ಸಿಗದ ಯೋಜನೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ರಮೇಶ್ ಕುಮಾರ್, ಮೊದಲು ಮಾತುಕತೆ, ನಿಶ್ಚಿತಾರ್ಥ, ಮದುವೆ ಎಲ್ಲವೂ ನಡೆಯುತ್ತೆ. ಅವೆಲ್ಲವೂ ಸರಿಯಾದರೆ 9 ತಿಂಗಳಲ್ಲಿ ಮಕ್ಕಳಾಗುತ್ತೆ. ಒಮ್ಮೊಮ್ಮೆ ನರಗಳ ದೌರ್ಬಲ್ಯ ಇದ್ದಾಗ ಮಕ್ಕಳಾಗೋದು ವಿಳಂಬವಾಗುತ್ತೆ ಎಂದು ಕುಟುಕಿದರು.

ಯೋಜನೆ ಜಾರಿಗೆ ತಂದಿದ್ದು ನಾವು ಎಂದು ಕುಮಾರಸ್ವಾಮಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕೆಆರ್​ಎಸ್​, ಎತ್ತಿನಹೊಳೆ, ಯರಗೋಳ, ಹೆಚ್​ಎನ್​ ವ್ಯಾಲಿ, ಕೆಸಿ ವ್ಯಾಲಿ, ಹೆಚ್​ಎಂಟಿ, ಹೆಚ್​ಎಲ್​ ಎಲ್ಲವೂ ಕುಮಾರಸ್ವಾಮಿಯದ್ದೇ. ನಾವು ಕುಮಾರಸ್ವಾಮಿ ಕೃಪೆಯಿಂದ ಬದುಕುತ್ತಿದ್ದೇವೆ. ನನ್ನನ್ನು ಭಗೀರಥ ಅಂತಾರೆ, ಮಹಾನ್ ನಾಯಕ, ನರಿ, ಶಕುನಿ ಅಂತಾರೆ. ನೀವು ಏನಾದರೂ ಹೆಸರು ಕೊಡಿ ಎಂದು ನಗೆಯಾಡಿದರು.

ಇದನ್ನೂ ಓದಿ :'ಸಿದ್ದರಾಮಯ್ಯ ಮೇಲಿನ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ, ಅವು ಕಾಂಗ್ರೆಸ್ ಮತಗಳಲ್ಲ'

ABOUT THE AUTHOR

...view details