ಕೋಲಾರ:ನಾನು ಮುಖ್ಯಮಂತ್ರಿಯ ಮಗನಾಗಿದ್ದರೂ ನನ್ನ ತಂದೆ ಯಾವತ್ತೂ ನಮಗೆ ಕೆಟ್ಟ ಬುದ್ಧಿ ಹೇಳಿಕೊಟ್ಟಿಲ್ಲ. ಹೀಗಾಗಿ ನಾನು ನಾಲ್ಕು ಬಾರಿ ಸೋತಿದ್ದೇನೆ ಎಂದು ಸಿಎಂ ಪುತ್ರ ವಿಜಯೇಂದ್ರಗೆ ಜೆಡಿಎಸ್ ನಾಯಕ ಮಧು ಬಂಗಾರಪ್ಪ ಟಾಂಗ್ ನೀಡಿದ್ದಾರೆ.
ನಮ್ಮ ತಂದೆ ಕೆಟ್ಟ ಬುದ್ಧಿ ಹೇಳಿಕೊಟ್ಟಿದ್ದರೆ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೆ: ಮಧು ಬಂಗಾರಪ್ಪ ಇಂದು ಕೋಲಾರಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿ, ಶಿರಾ ಉಪಚುನಾವಣೆ ಹಾಗೂ ವಿಜಯೇಂದ್ರ ಸ್ಪೀಡ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ತಂದೆ ಮುಖ್ಯಮಂತ್ರಿಯಾಗಿದ್ದರು, ಅವರು ನಮಗೆ ಕೆಟ್ಟ ಬುದ್ಧಿಯನ್ನ ಯಾವತ್ತೂ ಹೇಳಿ ಕೊಟ್ಟಿಲ್ಲ ಎಂದರು. ಅಲ್ಲದೆ ನಮ್ಮ ತಂದೆಯವರು ಬಹಳ ಒಳ್ಳೆಯ ಬುದ್ಧಿ ಹೇಳಿಕೊಟ್ಟಿದ್ದು, ಯಾರೇ ಆದರೂ ಸ್ಪೀಡ್ ಎನ್ನುವುದು ನಿಯತ್ತಾಗಿ ಹೋಗಬೇಕು ಎಂದರು. ಅಲ್ಲದೆ ಸಾಮಾನ್ಯ ಮಕ್ಕಳಿಂದ ಹಿಡಿದು ಮುಖ್ಯಮಂತ್ರಿಗಳ ಮಕ್ಕಳವರೆಗೂ ಸ್ಪೀಡ್ ಎನ್ನುವುದು ಅಡ್ಡದಾರಿ ಹಿಡಿಯಬಾರದು ಎಂದರು.
ಇನ್ನು ನಮ್ಮ ತಂದೆ ಕೆಟ್ಟ ಬುದ್ಧಿ ಹೇಳಿಕೊಟ್ಟಿದ್ದರೆ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೆ ಎಂದ ಅವರು, ಶಿರಾ ಉಪಚುನಾವಣೆಯಲ್ಲಿ ದುಡ್ಡು ಬಹಳ ಕೆಲಸ ಮಾಡಿದೆ ಎಂದು ದೂರಿದ್ರು. ಇನ್ನು ಕಾಂಗ್ರೆಸ್ ಸೇರ್ಪಡೆ ತಳ್ಳಿಹಾಕಿದ ಅವರು, ಡಿಕೆಶಿ ಹಾಗೂ ಕುಮಾರಸ್ವಾಮಿ ನನಗೆ ಎರಡು ಕಣ್ಣು ಇದ್ದಂತೆ. ಜೊತೆಗೆ ಡಿಕೆಶಿ ಅವರು ನಮ್ಮ ತಂದೆಯ ಅನುಯಾಯಿಗಳಾಗಿರುವ ಕಾರಣ ಆಗಿನಿಂದಲೂ ನನ್ನನ್ನ ಕಾಂಗ್ರೆಸ್ಗೆ ಹೋಗುತ್ತಾರೆ ಅನ್ನೋದು ಸಂಪ್ರದಾಯವಾಗಿದೆ ಎಂದರು.
ಇನ್ನು ಜೆಡಿಎಸ್ ಅಧಿಕಾರದಲ್ಲಿದ್ದಾಗ ಹೊರಟ್ಟಿ ಸೇರಿದಂತೆ ವಿಶ್ವನಾಥ್ ಇನ್ನಿತರರಿಗೆ ಅರ್ಥಪೂರ್ಣವಾದ ಸ್ಥಾನ ನೀಡಬೇಕಿತ್ತು. ಜೊತೆಗೆ ಪ್ರಸ್ತುತ ನಾನು ಜೆಡಿಎಸ್ನಲ್ಲಿ ತಟಸ್ಥವಾಗಿದ್ದು, ಗೊಂದಲದಲ್ಲಿದ್ದೇನೆ ಎಂದು ಹೇಳಿದ್ರು.