ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್ ನಿಷೇಧದ ನಡುವೆಯೂ ಜಲ್ಲಿಕಟ್ಟು ಆಚರಣೆ, ಸಣ್ಣಪುಟ್ಟ ಗಾಯ..

ರಾಸುಗಳ ಓಟದ ಸ್ಪರ್ಧೆ ‌ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ಮನೆ, ಮರಗಳ ಮೇಲೆ ಕುಳಿತು ಜನ ಜಲ್ಲಿಕಟ್ಟು ಸ್ಪರ್ಧೆ ನೋಡಿ ಕಣ್ತುಂಬಿಕೊಂಡ್ರು.

jallikattu-celebration-in-spite-of-supreme-court-ban-in-kolara
ಸುಪ್ರೀಂ ಕೋರ್ಟ್ ನಿಷೇಧದ ನಡುವೆಯೂ ಜಲ್ಲಿಕಟ್ಟು ಆಚರಣೆ

By

Published : Mar 10, 2020, 6:07 PM IST

ಕೋಲಾರ :ಜಿಲ್ಲೆಯ ಮಾಲೂರು ತಾಲೂಕಿನ ಗುಂಡ್ಲಪಾಳ್ಯ ಗ್ರಾಮದಲ್ಲಿ ರಾಸುಗಳ ಓಟದ ಸ್ಪರ್ಧೆ ನಡೆದಿದೆ. ರಾಸುಗಳನ್ನ ಹಿಡಿಯಲು ಹೋದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.

ಸುಪ್ರೀಂಕೋರ್ಟ್ ನಿಷೇಧದ ನಡುವೆಯೂ ಜಲ್ಲಿಕಟ್ಟು ಆಚರಣೆ..

ತಮಿಳುನಾಡಿನ ಪ್ರಭಾವ ಹೊಂದಿರುವ ಈ ಗಡಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರಾಸುಗಳ ಓಟದ ಸ್ಪರ್ಧೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ರು. ಗುಂಡ್ಲುಪೇಟೆ ಗ್ರಾಮದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ರಾಸುಗಳ ಓಟದಲ್ಲಿ ಹಸುಗಳನ್ನು‌ ಬಣ್ಣ ಬಣ್ಣವಾಗಿ ಸಿಂಗಾರ ಮಾಡಿ ಓಡಲು ಬಿಟ್ಟು ಹಿಡಿಯುವ ಸ್ಪರ್ಧೆಯಲ್ಲಿ ಪೈಪೋಟಿಯಿಂದ ನೂರಾರು ಜನ ಸೇರಿದ್ದರು.

ಇದೇ ವೇಳೆ ರಾಸುಗಳ ಓಟದ ಸ್ಪರ್ಧೆ ‌ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ಮನೆ, ಮರಗಳ ಮೇಲೆ ಕುಳಿತು ಜನ ಜಲ್ಲಿಕಟ್ಟು ಸ್ಪರ್ಧೆ ನೋಡಿ ಕಣ್ತುಂಬಿಕೊಂಡ್ರು.

For All Latest Updates

ABOUT THE AUTHOR

...view details