ಕೋಲಾರ:ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ದಾರೆ.
ಇಂದು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನ ಸೋಲಿಸಿದ್ದು ನಿಜ. ಜೊತೆಗೆ ಹದ್ದಾಗಿ ಕುಕ್ಕಿರುವುದು ನಿಜ ಎಂದು ನೇರವಾಗಿ ಉತ್ತರಿಸಿದ್ರು.
ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ ಇನ್ನು ನನ್ನನ್ನ ಎರಡು ಸಲ ಸೋಲುವಂತೆ ಕೆ.ಎಚ್. ಮುನಿಯಪ್ಪ ಅವರು ಮಾಡಿದ್ದರು, ಹೀಗಾಗಿ ನಾನು ಬಿಜೆಪಿಯೊಂದಿಗೆ ಕೈ ಜೋಡಿಸಿ ಸೋಲಿಸಿದ್ದೇನೆ ಎಂದರು. ಅಲ್ಲದೇ ಮುನಿಯಪ್ಪ ಅವರನ್ನ ಸೋಲಿಸುವುದಕ್ಕೆ ಏನೇನು ಪ್ರಯತ್ನ ಬೇಕೋ ಅದೆಲ್ಲವನ್ನೂ ಮಾಡಿದ್ದೇನೆ ಎಂದರು.
ಕೋಲಾರ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗೂ ಹೋಗಿ ಅವರ ವಿರುದ್ಧ ಪ್ರಚಾರ ನಡೆಸಿದ್ದೇನೆಂದು ತಿಳಿಸಿದ್ರು. ಇನ್ನು ಈ ವಿಚಾರವನ್ನ ಹೇಳುವುದಕ್ಕೆ ಯಾವುದೇ ಭಯ ಭಕ್ತಿ ಇಲ್ಲ, ಸಿದ್ದರಾಮಯ್ಯ ಹೇಳಿದಂತೆ ನಾನು ಹದ್ದಾಗಿ ಕುಕ್ಕಿದ್ದೇನೆಂದರು.