ಕರ್ನಾಟಕ

karnataka

ETV Bharat / state

ಕೆಜಿಎಫ್ ನಗರದಲ್ಲಿ ರೌಡಿಗಳ ಅಟ್ಟಹಾಸ : ಸ್ಥಳಕ್ಕೆ ಐಜಿಪಿ ಸೀಮಂತ್‌ಕುಮಾರ್‌ ಸಿಂಗ್‌ ಭೇಟಿ - murder in kgf case updates

ಕಳೆದ ಒಂದು ವಾರದ ಹಿಂದಷ್ಟೇ ಯುವಕನೋರ್ವನನ್ನ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರವನ್ನ ಬೆಚ್ಚಿ ಬೀಳಿಸಿತ್ತು..

igp  seemanth  kumar singh visits kgf
ಐಜಿಪಿ ಭೇಟಿ

By

Published : Sep 2, 2020, 4:35 PM IST

ಕೋಲಾರ :ಇತ್ತೀಚೆಗೆ ಕೆಜಿಎಫ್​​ನಲ್ಲಿ‌ ಲಾಂಗ್ ಹಿಡಿದು ರೌಡಿಗಳು ಅಟ್ಟಹಾಸ ಮೆರೆದಿದ್ದ ಹಿನ್ನೆಲೆ ಕೇಂದ್ರ ವಲಯದ ಐಜಿಪಿ ಸೀಮಂತ್‌ಕುಮಾರ್ ಸಿಂಗ್ ಕೆಜಿಎಫ್ ಸಿಟಿ ರೌಂಡ್ಸ್ ಮಾಡಿದ್ರು.

ಕೆಜಿಎಫ್‌ಗೆ ಐಜಿಪಿ ಭೇಟಿ

ಕಳೆದ ಒಂದು ವಾರದ ಹಿಂದಷ್ಟೇ ಯುವಕನೋರ್ವನನ್ನ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರವನ್ನ ಬೆಚ್ಚಿ ಬೀಳಿಸಿತ್ತು. ಇದಲ್ಲದೆ ಕೆಜಿಎಫ್ ನಗರದ ಸಲ್ಡಾನಾ ಸರ್ಕಲ್​​ನ‌ ಆರ್‌ಎಂ ಬಾರ್ ಮುಂದೆ ರೌಡಿಶೀಟರ್ ಎಡ್ವಿನ್ ಎಂಬಾತ ಲಾಂಗ್ ಹಿಡಿದು ಮದ್ಯದಂಗಡಿಯಲ್ಲಿ ಬಿಯರ್​​​ಗೆ ಡಿಮ್ಯಾಂಡ್​​​ ಮಾಡಿದ್ದಲ್ಲದೆ ದಾರಿಹೋಕರಿಗೆ ಲಾಂಗ್ ತೋರಿಸಿ ಬೆದರಿಸಿದ್ದ.

ಕೆಜಿಎಫ್ ಪುಡಿ ರೌಡಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸ್ಥಳೀಯರಲ್ಲಿ ಆತಂಕದ ಜೊತೆ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ಈ ಹಿನ್ನೆಲೆ ‌ಕೆಜಿಎಫ್​​​ ಎಲ್ಲೆಡೆ ಪೊಲೀಸರು ಸಖತ್ ಅಲರ್ಟ್ ಆಗಿದ್ರು. ಜೊತೆಗೆ ನಗರಕ್ಕೆ ಭೇಟಿ ನೀಡಿದ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಎಸ್‌ಪಿ ಇಲ್ಲಕ್ಕಿಯ ಕರುಣಾಗರನ್ ಹಾಗೂ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ ಮಾಡಿ ಸಭೆ ನಡೆಸಿದ್ರು. ಅಲ್ಲದೆ ಕೃತ್ಯ ನಡೆದ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳದಲ್ಲಿದ್ದವರನ್ನ ವಿಚಾರಣೆ ನಡೆಸಿದ್ರು.

ABOUT THE AUTHOR

...view details