ಕೋಲಾರ: ಸಿಎಂ ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯ ಶಕ್ತಿ ಕೊಟ್ಟಿದ್ದಾನೆ. ಅದಕ್ಕೆ ಪ್ರವಾಹದ ಪರಿಸ್ಥಿತಿಯನ್ನು ಒಬ್ಬರೆ ನಿಭಾಯಿಸುತ್ತಿದ್ದಾರೆ. ಒಂದು ವಾರದಲ್ಲಿ ಎಲ್ಲವೂ ಸರಿಹೋಗುತ್ತೆ. ಇಳಿ ವಯಸ್ಸಿನಲ್ಲೂ ಶಕ್ತಿ ಮೀರಿ ಬಿಎಸ್‍ವೈ ಕೆಲಸ ಮಾಡುತ್ತಿದ್ದಾರೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಹೆಚ್.ನಾಗೇಶ್ ಹೇಳಿದರು.
ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವನಾಗಿದ್ದೆ. ಒಳ್ಳೆಯ ಇಲಾಖೆ ಕೊಟ್ಟರೆ ನಿಭಾಯಿಸುವೆ. ಅದರಲ್ಲೂ ಇಂಧನ ಇಲಾಖೆ ಬಗ್ಗೆ ನನಗೆ ಎಲ್ಲವೂ ಗೊತ್ತು. ಆ ಸ್ಥಾನ ಕೊಟ್ಟರೆ ಸುಲಭವಾಗಿ ನಿಭಾಯಿಸುವೆ ಎನ್ನುವ ಮೂಲಕ ಇಂಧನ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ ಶಾಸಕ ಹೆಚ್.ನಾಗೇಶ್.
ಪಕ್ಷೇತರ ಶಾಸಕ ಹೆಚ್.ನಾಗೇಶ್.. ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಬಗ್ಗೆ ಮಾತನಾಡುವುದು ಅಪ್ರಸ್ತುತ. ಅವರ ಜಮಾನ ಮುಗೀತು. ನಮ್ಮಂತವರ ಬಗ್ಗೆ ಮಾತನಾಡುವ ಅರ್ಹತೆ ಅವರಿಗೆ ಇಲ್ಲ. ಈಗೇನಿದ್ರೂ ಅವರು ವಾಚ್ ಮಾಡಬೇಕಷ್ಟೆ. ಅವರ ಕೈಲಾದ್ರೆ ಮಾಡಬೇಕು, ಇಲ್ಲವಾದಲ್ಲಿ ಮನೆಯಲ್ಲಿರಬೇಕು ಎಂದರು.
ನನಗೆ ಯಾರೂ ಗಾಡ್ ಫಾದರ್ ಇಲ್ಲ. ನನ್ನ ತಂದೆ ತಾಯಿಯೇ ನನ್ನ ಗಾಡ್ ಫಾದರ್ ಎನ್ನುವ ಮೂಲಕ ಈ ಹಿಂದೆ ನನಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗಾಡ್ ಫಾದರ್ ಎಂದಿದ್ದ ನಾಗೇಶ್, ನೋಡಿಕೊಂಡು ಒಳ್ಳೆಯ ಗಾಡ್ ಫಾದರ್ ಹುಡಕಿಕೊಳ್ತೇನೆ, ನಾನು ಮತ್ತು ಮಾಜಿ ಶಾಸಕ ಮಂಜುನಾಥ್ ಲವ-ಕುಶ ಇದ್ದಂತೆ ಎಂದು ಹೇಳಿದ್ರು.