ಕೋಲಾರ:ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪ್ರಕರಣ ಕಂಡು ಬಂದಿಲ್ಲ. ಮುಂದೆ ಕಂಡು ಬಂದರೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದು, ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜಿಲ್ಲಾ ಪಂಚಾಯತ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಕೊರೊನಾ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪ್ರಕರಣವಿಲ್ಲದಂತೆ ಕಾಪಾಡಿಕೊಂಡು ಬರಲಾಗಿದೆ. ಆದ್ರೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಂಕು ಬರುವ ಸಾಧ್ಯತೆ ಇದೆ. ಒಂದು ವೇಳೆ ಪ್ರಕರಣ ಕಂಡು ಬಂದರೆ ಅಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.
ಬಂಗಾರಪೇಟೆಯಲ್ಲಿ ಸುಮಾರು 18 ಮಂದಿ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರದೆ ಮಸೀದಿಯಲ್ಲಿ ಹೋಂ ಕ್ವಾರಂಟೈನ್ ಮಾಡಿರುವುದು ಅಪರಾಧವಾಗಿದೆ. ತಾಲೂಕು ಅಧಿಕಾರಿಗಳು ಇದುವರೆಗೂ ಜಿಲ್ಲಾಡಳಿತದ ಗಮನಕ್ಕೆ ತಂದಿಲ್ಲವೆಂದು ಗರಂ ಆದ್ರು. ಇನ್ನು ದೇಶ ಲಾಕ್ಡೌನ್ ಆದ ಮೇಲೆ ನಾಲ್ಕೈದು ದಿನ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಆದ್ರೆ ಇತ್ತೀಚಿಗೆ ಜನ್ರ ಓಡಾಟ ಹೆಚ್ಚಾಗಿದೆ. ಗಡಿಯಲ್ಲಿ ತಪಾಸಣೆ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಇನ್ನು ಇದೇ ವೇಳೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ವೈದ್ಯರಿಗೆ ರೋಗ ಬರುವ ಮೊದಲೇ ಪಿಪಿಟಿ ಕಿಟ್‍ಗಳನ್ನು ಕೊಡಬೇಕಾಗಿದೆ. ಅವರೂ ಮನುಷ್ಯರು, ಅವರಿಗೂ ಕುಟುಂಬವಿದೆ. ಆಸ್ಪತ್ರೆಗೆ ಹೋಗುವಂತಹ ರೋಗಿಗಳನ್ನು ನೋಡುತ್ತಿರುವುದರಿಂದ ಅವ್ರಿಗೂ ಪ್ರಾಣದ ಮೇಲೆ ಭಯವಿದೆ. ಹೀಗಾಗಿ ಸರ್ಕಾರ ಪಿಪಿಟಿ ಕಿಟ್‍ಗಳನ್ನು ನೀಡಬೇಕು ಎಂದು ಆಗ್ರಹಿಸಿದ್ರು.