ಕರ್ನಾಟಕ

karnataka

ETV Bharat / state

ಮುಂಬೈನಿಂದ ಕೋಲಾರಕ್ಕೆ ಬಂದ ಪತಿ, ಪತ್ನಿ, 2 ವರ್ಷದ ಮಗುವಿಗೆ ವಕ್ಕರಿಸಿದ ಕೊರೊನಾ - ಮುಂಬೈನಿಂದ ಬಂದ ಪತಿ, ಪತ್ನಿ,

ಕೋಲಾರ ಜಿಲ್ಲೆಯಲ್ಲಿ 41 ಜನ ಸೋಂಕಿತರ ಪೈಕಿ 26 ಜನರು ಡಿಸ್ಚಾರ್ಜ್​ ಆಗಿದ್ದಾರೆ ಅನ್ನೋ ನೆಮ್ಮದಿಯ ವಿಚಾರಕೂಡಾ ಇದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಬಹುತೇಕ ಎಲ್ಲರಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ.

ಕೊರೊನಾ
ಕೊರೊನಾ

By

Published : Jun 14, 2020, 12:19 AM IST

Updated : Jun 14, 2020, 2:18 AM IST

ಕೋಲಾರ: ಮುಂಬೈನಿಂದ ಜಿಲ್ಲೆಗೆ ಬಂದ ಪತಿ, ಪತ್ನಿ ಹಾಗೂ ಎರಡು ವರ್ಷದ ಮಗುವಿಗೂ ಕೊರೊನಾ ವಕ್ಕರಿಸಿದೆ.

ಜಿಲ್ಲೆಯಲ್ಲಿ ಈವರೆಗೆ 41 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಹೆಚ್ಚಾಗಿ ಚೆನ್ನೈ ಮಾರುಕಟ್ಟೆಗೆ ಹೋಗಿ ಬಂದಿದ್ದ ಸುಮಾರು 10ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. 41 ಜನ ಸೋಂಕಿತರಲ್ಲಿ 26 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ

ಮುಂಬೈನಿಂದ ಬಂದ ಗಂಡ ಹೆಂಡತಿ ಹಾಗೂ ಎರಡು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಪಾತ್ರೆ ವ್ಯಾಪಾರ ಮಾಡುತ್ತಿದ್ದ ಈ ಕುಟುಂಬಸ್ಥರು ಬಂಗಾರಪೇಟೆ ಪಟ್ಟಣದಲ್ಲಿ ನೆಲೆಸಿದ್ದಾರೆ. ಆದರೆ ಮೂಲತಃ ಇವರು ಮಹಾರಾಷ್ಟ್ರದವರಾದ ಕಾರಣ ತನ್ನ ಮಡದಿ ಮತ್ತು ಮಕ್ಕಳನ್ನು ಕರೆತರಲು ಹೋಗಿದ್ದ ವ್ಯಕ್ತಿ, ಮುಂಬೈನ ಗ್ರೀನ್​ ಜೋನ್​ ಪ್ರದೇಶದಿಂದ ಹಿಂತಿರುಗಿದ್ದರು. ಆದರೂ ಸಹ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು, ಮೂವರ ವರದಿಯೂ ಪಾಸಿಟಿವ್​ ಬಂದಿದೆ.

26 ವರ್ಷದ ಪತಿ P-6175, 24 ವರ್ಷದ ಪತ್ನಿ P-6173 ಹಾಗೂ ಎರಡು ವರ್ಷದ ಮಗು P-6174ರನ್ನು ಕೋವಿಡ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Jun 14, 2020, 2:18 AM IST

ABOUT THE AUTHOR

...view details