ಕೋಲಾರ: ನಗರದಲ್ಲಿ ಕಳೆದ ರಾತ್ರಿ ಸಿಡಿಲು ಸಹಿತ ಮಳೆಯಿಂದಾಗಿ ಹೆಂಚಿನ ಮನೆಯೊಂದು ಸಂಪೂರ್ಣ ನಾಶವಾಗಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಬಳಿಯ ಜಂಗಮಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಲಾರದಲ್ಲಿ ಸಿಡಿಲು ಸಹಿತ ಮಳೆಗೆ ಧರೆಗುರುಳಿದ ಮನೆ - Rain
ಕೆಜಿಎಫ್ ತಾಲೂಕಿನ ಬೇತಮಂಗಲ ಬಳಿಯ ಜಂಗಮಾನಹಳ್ಳಿಯಲ್ಲಿ ಕಳೆದ ರಾತ್ರಿ ಸಿಡಿಲು ಸಹಿತ ಮಳೆಯಿಂದಾಗಿ ಹೆಂಚಿನ ಮನೆಯೊಂದು ಸಂಪೂರ್ಣ ಧ್ವಂಸವಾಗಿದೆ.
ಕೋಲಾರದಲ್ಲಿ ಸಿಡಿಲು ಸಹಿತ ಮಳೆಗೆ ಧರೆಗುರುಳಿದ ಮನೆ
ಜಂಗಮಾನಹಳ್ಳಿಯ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಈ ಘಟನೆಯಿಂದ ಒಬ್ಬ ಗಾಯಗೊಂಡಿದ್ದಾನೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಮನೆ ಹೆಂಚುಗಳು ಸೇರಿದಂತೆ, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಹಾನಿಯಾಗಿವೆ. ಗಾಯಗೊಂಡ ವ್ಯಕ್ತಿಯನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Last Updated : Oct 7, 2019, 2:41 PM IST