ಕೋಲಾರ:ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ನೆನೆದು, ನಗರದ ನಿವೃತ್ತ ಯೋಧರು ಹಾಗೂ ಕ್ರೀಡಾಪಟುಗಳನ್ನು ಗೌರವಿಸಲಾಯಿತು. .
ಹುತಾತ್ಮ ಯೋಧರಿಗೆ ಗೌರವ... ನಿವೃತ್ತ ಯೋಧರಿಗೆ ಸನ್ಮಾನ... - undefined
ಇಂದು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ನೆನೆದು ಕೋಲಾರದಲ್ಲಿ ನಿವೃತ್ತ ಯೋಧರು ಹಾಗೂ ಕ್ರೀಡಾಪಟುಗಳು ಗೌರವ ಸಮರ್ಪಿಸಿದರು
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಿವೃತ್ತ ಯೋಧರು ಹಾಗೂ ಕ್ರೀಡಾಪಟುಗಳು, ತ್ರಿವರ್ಣ ಧ್ವಜ ಹಿಡಿದು ರ್ಯಾಲಿ ಮಾಡುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. 1999 ರಲ್ಲಿ ಕಾರ್ಗಿಲ್ ಮೇಲೆ ಪಾಕಿಸ್ತಾನ ದಾಳಿ ಮಾಡಿತ್ತು, ಈ ವೇಳೆ ಸತತ ಮೂರು ತಿಂಗಳ ಕಾಲ ಪ್ರತಿ ದಾಳಿ ನಡೆಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಿತ್ತು. ಈ ಹಿನ್ನೆಲೆ ಯುದ್ಧದಲ್ಲಿ ಹುತಾತ್ಮರಾದ ಅದೆಷ್ಟೋ ಯೋಧರು ಹಾಗೂ ಅವರ ಕುಟುಂಬಗಳನ್ನ ಸ್ಮರಿಸುತ್ತಾ ಅವರಿಗೆ ಗೌರವ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರು ಸೇರಿದಂತೆ ನಿವೃತ್ತ ಯೋಧರನ್ನ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ನಿವೃತ್ತ ಯೋಧರು ವಿಜಯ್ ದಿನವನ್ನ ಪರಸ್ಪರ ಹಸ್ತ ಲಾಘವ ಮಾಡುವ ಮೂಲಕ ಖುಷಿ ಹಂಚಿಕೊಂಡರು.