ಕರ್ನಾಟಕ

karnataka

ETV Bharat / state

ಕೆಜಿಎಫ್​: ಅಂಬೇಡ್ಕರ್ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ - Ambedkar Bhavana in KGF park

ಕೆಜಿಎಫ್ ನಗರದ ಅಂಬೇಡ್ಕರ್ ಪಾರ್ಕ್​​ನಲ್ಲಿರುವ ಅಂಬೇಡ್ಕರ್ ಭವನವನ್ನು ತೆರವು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.

High Court order to vacate Ambedkar Bhavana in kolara park
ಕೋಲಾರ: ಅಂಬೇಡ್ಕರ್ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ

By

Published : Jul 16, 2022, 4:03 PM IST

ಕೋಲಾರ: ಕೆಜಿಎಫ್​ನ ಪಾರ್ಕ್ ಜಾಗದಲ್ಲಿರುವ ಅಂಬೇಡ್ಕರ್ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಅಂಬೇಡ್ಕರ್ ಪಾರ್ಕ್​​ನಲ್ಲಿ ವೈ.ಸಂಪಂಗಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿತ್ತು. ಆದರೆ ಪಾರ್ಕ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿರೋಧಿಸಿ ಆರ್.ಪಿ.ಐ ಪಕ್ಷದ ಮುಖಂಡರು ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಇನ್ನು ಕೆಜಿಎಫ್ ನಗರಸಭೆಯಿಂದ ಅಂಬೇಡ್ಕರ್ ಭವನ ತೆರವು ಮಾಡದಂತೆ ಹೈಕೋರ್ಟ್​ಗೆ ಮನವಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಮಲಗಿದ್ದ ತಾಯಿ, ಮಗಳ ಮೇಲೆ ಕುಸಿದ ಗೋಡೆ

ABOUT THE AUTHOR

...view details