ಕೋಲಾರ : ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಮನೆ ಸೇರಿ ವಿದ್ಯುತ್ ಕಂಬಗಳು ಹಾಗೂ ಬೃಹತ್ ಮರಗಳು ನೆಲಕ್ಕುರುಳಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೆಜಿಎಫ್‌ನ ಗೌತಮ್ ನಗರ, ರಾಬರ್ಟ್‌ಸನ್‌ಪೇಟೆ ಹಾಗೂ ನ್ಯಾಯಾಲಯದ ಬಳಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ನ್ಯಾಯಾಲಯದ ಬಳಿ ಇದ್ದ ಬೃಹತ್ ಮರಗಳು ನೆಲಕ್ಕುರುಳಿ, ಮರಗಳಡಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು, ಆಟೋ ಜಖಂ ಆಗಿವೆ.
ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸದ್ಯ ಪೊಲೀಸರು ಹಾಗೂ ಸ್ಥಳೀಯರು ಸೇರಿ ಮರ ಹಾಗೂ ವಿದ್ಯುತ್ ಕಂಬಗಳನ್ನ ತೆರವು ಮಾಡಿದ್ದಾರೆ.