ಕರ್ನಾಟಕ

karnataka

ETV Bharat / state

ಬರದನಾಡಲ್ಲಿ ಉಕ್ಕಿ ಹರಿಯುತ್ತಿರುವ ಬೋರ್​ ವೆಲ್​ಗಳು: ಆದರೂ ಜನರಲ್ಲಿ ಆತಂಕ...ಕಾರಣ..? - ಕೋಲಾರ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಬೋರ್​ ವೆಲ್​ಗಳು

ನೀರಿಲ್ಲದೆ ದಶಕಗಳಕಾಲ ನೀರಿಗಾಗಿ ಪರಿತಪಿಸುತ್ತಿದ್ದ ಜಿಲ್ಲೆಯ ಜನರಿಗೆ, ಕಳೆದ ತಿಂಗಳು ಸುರಿದ ಈ ಮಾಯದಂತ ಮಳೆಯಿಂದ ಕೆರೆ ಹಳ್ಳಗಳೆಲ್ಲಾ ತುಂಬಿ ಪಾತಾಳ ಸೇರಿದ್ದ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಆದರೆ, ಆ ಮಳೆ ನೀರು ಕೂಡಾ ಕೆಲವು ಆತಂಕ ಸೃಷ್ಟಿಸಿದ್ದು, ಅದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಜನರಿಗೆ ಅರಿವು ಮೂಡಿಸಬೇಕಿದೆ.

ಬರದನಾಡಲ್ಲಿ ಉಕ್ಕಿ ಹರಿಯುತ್ತಿರುವ ಬೋರ್​ ವೆಲ್​ಗಳು
ಬರದನಾಡಲ್ಲಿ ಉಕ್ಕಿ ಹರಿಯುತ್ತಿರುವ ಬೋರ್​ ವೆಲ್​ಗಳು

By

Published : Dec 27, 2021, 8:52 PM IST

Updated : Dec 27, 2021, 9:46 PM IST

ಕೋಲಾರ : ಅದು ಬರದನಾಡಲ್ಲಿ ಸುರಿದ ಮಾಯದಂತ ಮಳೆ. ಇದರಿಂದ ಬತ್ತಿಹೋಗಿದ್ದ ಬೋರ್​ ವೆಲ್​ಗಳಲ್ಲಿ ಜೀವ ಜಲವೇ ಭೂಮಿಯಿಂದ ಚಿಮ್ಮುತ್ತಿದೆ. ಬರದನಾಡಲ್ಲಿ ರೈತರ ಬದುಕು ಮುಗಿದೇ ಹೋಯಿತು ಎನ್ನುತ್ತಿದ್ದವರ ಬದುಕಲ್ಲೂ ಮತ್ತೆ ಉತ್ಸಾಹ ಚಿಮ್ಮುತ್ತಿದೆ. ಬತ್ತಿಹೋಗಿದ್ದ ಬೋರ್​ವೆಲ್​ಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಆದರೆ, ಅಲ್ಲೂ ಒಂದು ಭಯ ಜನರನ್ನ ಕಾಡುತ್ತಿದೆ.

ಹೌದು ಕಳೆದ ನವೆಂಬರ್​ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಾಯದಂತ ಮಳೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ಜೀವ ಜಲವಿಲ್ಲದೇ ಹನಿ ನೀರಿಗೂ ಪರದಾಡುತ್ತಿದ್ದ ಜಿಲ್ಲೆಯಲ್ಲಿ ಈಗ ನೀರಿನ ಚಿಲುಮೆಯೇ ಉಕ್ಕಿ ಹರಿಯುತ್ತಿದೆ. ಪರಿಣಾಮ ಬತ್ತಿಹೋಗಿದ್ದ ಬೋರ್​ವೆಲ್​ಗಳಲ್ಲಿ ನೀರು ಬರಲಾರಂಭಿಸಿದೆ. ಇದರಿಂದ ಜಿಲ್ಲೆಯ ರೈತರು ಸಂತೋಷ ಪಡುವಂತ ವಾತಾವರಣ ನಿರ್ಮಾಣವಾಗಿದೆ.

ಬರದನಾಡಲ್ಲಿ ಉಕ್ಕಿ ಹರಿಯುತ್ತಿರುವ ಬೋರ್​ ವೆಲ್​ಗಳು

ತಂತಾನೇ ಉಕ್ಕಿ ಹರಿಯುತ್ತಿರುವ ಬೋರ್​ವೆಲ್​ಗಳು

ಅದರಲ್ಲೂ ಬತ್ತಿಹೋಗಿದ್ದ ಬೋರ್​ವೆಲ್​ಗಳಲ್ಲೂ ನೀರು ತುಂಬಿ ಹರಿಯುತ್ತಿರುವುದು ರೈತರಿಗೆ ಇನ್ನಿಲ್ಲದ ಸಂತಸ ಮೂಡುವಂತೆ ಮಾಡಿದೆ. ಜಿಲ್ಲೆಯ ಕೋಲಾರ ತಾಲೂಕಿನ ಅಮ್ಮೇರಹಳ್ಳಿ, ಗದ್ದೆ ಕಣ್ಣೂರು, ಗಾಂಧಿನಗರ, ಮಡೇರಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಕೆಜಿಎಫ್​ ನಗರ ಸೇರಿದಂತೆ ಹಲವು ಹಳ್ಳಿಗಳಲ್ಲೂ ನೀರು ತಂತಾನೇ ಬೋರ್​ವೆಲ್​ಗಳಿಂದ ಉಕ್ಕಿ ಹರಿಯುತ್ತಿವೆ. ಹಾಗಾಗಿ ರೈತರು ಹಾಗೂ ಜಿಲ್ಲೆಯ ಜನರು ಈಗಲಾದರೂ ಜಿಲ್ಲೆಗೆ ನೀರಿನ ಬರ ಹರಿದಂತಾಗಿದೆ ಎಂದು ಖುಷಿಯಾಗಿದ್ದಾರೆ.

ಆದರೆ, ಈ ನಡುವೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪನ ವಾಗಿದ್ದು ಭೂಮಿ ಕಂಪಿಸೋದಕ್ಕೆ ಅತಿಯಾದ ಮಳೆಯು ಒಂದ ಕಾರಣ ಎಂದು ಅಭಿಪ್ರಾಯ ಪಟ್ಟಿರುವ ಹಿನ್ನೆಲೆ, ಜಿಲ್ಲೆಯ ಜನರು ಕೊಂಚ ಆತಂಕ ಗೊಂಡಿದ್ದಾರೆ.

ಇನ್ನು ಅದಕ್ಕೆ ಪೂರಕ ಎಂಬಂತೆ ಜಿಲ್ಲೆಯ ಪಕ್ಕದ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ನಡೆದ ಭೂಕಂಪನಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದ ವಿಜ್ಞಾನಿಗಳ ಪ್ರಕಾರ ಅತಿಯಾದ ಮಳೆ ಬಂದ ಹಿನ್ನೆಲೆ ಅಂತರ್ಜಲದಲ್ಲಿ ನೀರು ಹೆಚ್ಚಾಗಿ ಭೂಕಂಪನಕ್ಕೆ ಅದು ಕೂಡಾ ಒಂದು ಕಾರಣ ಇರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಬೋರ್​ವೆಲ್​ಗಳಲ್ಲಿ ನೀರು ತಂತಾನೆ ಉಕ್ಕಿ ಹರಿಯುತ್ತಿರುವುದರಿಂದ, ಆ ರೀತಿಯ ಭೂಕಂಪನದ ಸಾಧ್ಯತೆ ಇರಬಹುದಾ ಅನ್ನೋ ಭಯ ಶುರುವಾಗಿದೆ.

ಅತಿಯಾದ ಮಳೆಯೇ ಕಂಪನಕ್ಕೆ ಕಾರಣವಾಗಿರಬಹುದು?

ಜೊತೆಗೆ ಹಿರಿಯ ಭೂ ವಿಜ್ಞಾನಿಗಳ ಪ್ರಕಾರ ಅತಿಯಾದ ಮಳೆಯಿಂದ ಭೂಮಿಯ ಅಂತರ್ಜಲಕ್ಕೆ ನೀರು ಹೋಗಿ ಅಲ್ಲಿನ ನೀರಿನ ಗ್ಯಾಪ್​ಗಳಲ್ಲಿ ನೀರು ತುಂಬಿಕೊಂಡು ಅಲ್ಲಿ ವ್ಯಾಕ್ಯೂಮ್​ ಸೃಷ್ಟಿಯಾಗಿ ಏರ್​ ಔಟ್​ ಆಗುವಾಗ ಈ ರೀತಿಯ ಕಂಪನ ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ನೀರು ಹೊರ ಬರುವ ಸ್ಥಳಗಳಲ್ಲಿ ನೀರು ಹೊರಬರುವಾಗ ಅಲ್ಲಿನ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಜನವಸತಿ ಪ್ರದೇಶಗಳಲ್ಲಿನ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುತ್ತದೆ. ಅಂತ ಪ್ರದೇಶಗಳಲ್ಲಿ ಜನರನ್ನು ಕೆಲ ಕಾಲ ಸ್ಥಳಾಂತರ ಮಾಡುವ ಅವಶ್ಯಕತೆ ಇರುತ್ತದೆ. ಅದರೆ ಇಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಒಟ್ಟಾರೆ ನೀರಿಲ್ಲದೆ ದಶಕಗಳಕಾಲ ನೀರಿಗಾಗಿ ಪರಿತಪಿಸುತ್ತಿದ್ದ ಜಿಲ್ಲೆಯ ಜನರಿಗೆ, ಕಳೆದ ತಿಂಗಳು ಸುರಿದ ಈ ಮಾಯದಂತ ಮಳೆಯಿಂದ ಕೆರೆ ಹಳ್ಳಗಳೆಲ್ಲಾ ತುಂಬಿ ಪಾತಾಳ ಸೇರಿದ್ದ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಆದರೆ, ಆ ಮಳೆ ನೀರು ಕೂಡಾ ಕೆಲವು ಆತಂಕ ಸೃಷ್ಟಿಸಿದ್ದು, ಅದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಜನರಿಗೆ ಅರಿವು ಮೂಡಿಸಬೇಕಿದೆ.

Last Updated : Dec 27, 2021, 9:46 PM IST

For All Latest Updates

TAGGED:

ABOUT THE AUTHOR

...view details