ಕೋಲಾರ:ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ, ರೈಲ್ವೆ ಅಂಡರ್ ಪಾಸ್ನಲ್ಲಿ ಇನ್ನೋವಾ ಕಾರೊಂದು ಮುಳುಗಿದ್ದು, ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದೆ.
ಕೋಲಾರದಲ್ಲಿ ಧಾರಾಕಾರ ಮಳೆ: ರೈಲ್ವೆ ಅಂಡರ್‌ಪಾಸ್ ಬಳಿ ನೀರಿನಲ್ಲಿ ಮುಳುಗಿದ ಕಾರು - Car caught in water in Kolar
ನಿನ್ನೆ ಸಂಜೆಯಿಂದ ಕೋಲಾರದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರೈಲ್ವೆ ಅಂಡರ್ ಪಾಸ್ನಲ್ಲಿ ಇನ್ನೋವಾ ಕಾರ್ ಒಂದು ಮುಳುಗಿದ್ದು, ಕಾರಿನಲ್ಲಿದ್ದವರನ್ನ ರಕ್ಷಣೆ ಮಾಡಲಾಯಿತು.
ರೈಲ್ವೆ ಅಂಡರ್ ಪಾಸ್ ಬಳಿ ನೀರಿನಲ್ಲಿ ಮುಳುಗಿದ ಕಾರು
ನಗರದ ಕೀಲುಕೋಟೆ ಬಡಾವಣೆ ಬಳಿಯ ರೈಲ್ವೆ ಅಂಡರ್ಪಾಸ್ನಲ್ಲಿ ಕಳೆದ ರಾತ್ರಿ ಈ ಘಟನೆ ಜರುಗಿದೆ. ಕಾರ್ನಲ್ಲಿದ್ದ ನಾಲ್ವರನ್ನ ಸುರಕ್ಷಿತವಾಗಿ ಸ್ಥಳೀಯರು ದಡ ಸೇರಿದ್ದಾರೆ.
ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ಪಾಸ್ಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಈ ಅವಾಂತರ ನಡೆಯಿತು ಎಂದು ಸ್ಥಳೀಯರು ದೂರಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಕೋಲಾರ ನಗರದಲ್ಲಿರುವ ಅಂಡರ್ಪಾಸ್ಗಳಲ್ಲಿ ನೀರು ತುಂಬಿಕೊಂಡು ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.