ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಭಾರೀ ಮಳೆ.. ರಸ್ತೆ ಮಧ್ಯೆ ಮಗುಚಿದ ಟೆಂಪೋ, ಮನೆಗೋಡೆ ಕುಸಿತ

ಕೋಲಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಮಳೆಹಾನಿ ಉಂಟಾಗಿದೆ. ಭಾರೀ ಮಳೆಗೆ ರಸ್ತೆಗಳು ಹಾಳಾಗಿ ವಾಹನ ಅಪಘಾತವಾಗಿದ್ದು, ಜಿಲ್ಲೆಯ ಹಲವೆಡೆ ಮಳೆ ನೀರು ಮನೆಗೆ ನುಗ್ಗಿದೆ. ಚಿನ್ನಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ.

heavy-rain-in-kolar-leads-serial-accidents
ಕೋಲಾರದಲ್ಲಿ ಭಾರೀ ಮಳೆ...ರಸ್ತೆಯಲ್ಲಿ ಗುಂಡಿ ಬಿದ್ದು ಅಪಘಾತ...ಮನೆಗೋಡೆ ಕುಸಿತ

By

Published : Sep 7, 2022, 5:23 PM IST

ಕೋಲಾರ : ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಾಲೂರು ಪಟ್ಟಣದ ಬೆಂಗಳೂರು ರಸ್ತೆ ಗುಂಡಿ ಬಿದ್ದು ಹಾಳಾಗಿದ್ದು, ಟೆಂಪೋವೊಂದು ರಸ್ತೆಯ ಮಧ್ಯೆ ಉರುಳಿಬಿದ್ದಿದೆ. ಇದರಿಂದಾಗಿ ಮಾಲೂರು ಬೆಂಗಳೂರು ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಸಂಚಾರ ಸುಗಮಗೊಳಿಸಿದರು.

ಇನ್ನು, ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಹಲವು ಅನಾಹುತ ಉಂಟಾಗಿವೆ. ಇಲ್ಲಿನ ಕೆಜಿಎಫ್ ತಾಲೂಕು ಬೇತಮಂಗಲ ಗ್ರಾಮದ 4ನೇ ಬ್ಲಾಕ್ ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಮನೆ ಹಾಗೂ ಕುರಿ ಶೆಡ್ ಗೆ ನೀರು ನುಗ್ಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಕೋಲಾರದಲ್ಲಿ ಭಾರೀ ಮಳೆ...ರಸ್ತೆಯಲ್ಲಿ ಗುಂಡಿ ಬಿದ್ದು ಅಪಘಾತ...ಮನೆಗೋಡೆ ಕುಸಿತ

ಅಲ್ಲದೆ ಚಿನ್ನಾಪುರ ಗ್ರಾಮದಲ್ಲಿ ರುಕ್ಮಿಣಿ ಎಂಬುವರ ಮನೆಯ ಗೋಡೆ ಕುಸಿತವಾಗಿದೆ. ತಡರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದಿದ್ದು, ಅದೃಷ್ಟವಶಾತ್​ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಧಾರಾಕಾರ ಮಳೆಗೆ ಅಜ್ಜಂಪುರ ತಾಲೂಕು ಜಲಾವೃತ

ABOUT THE AUTHOR

...view details