ಕರ್ನಾಟಕ

karnataka

ETV Bharat / state

ಹೆಚ್ಚುತ್ತಿದೆ ಬಿಸಿಲ ಝಳ: ಬಡವರ ಫ್ರಿಡ್ಜ್​ಗೆ ಬಂತು ಬೇಡಿಕೆ

ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ದುಬಾರಿ ಬೆಲೆ ತೆತ್ತು ದಾಹ ತೀರಿಸಿಕೊಳ್ಳುತ್ತಿದ್ದ ಕೋಲಾರದ ನಿವಾಸಿಗರು ಆರೋಗ್ಯದ ಹಿತದೃಷ್ಟಿಯಿಂದ ಇದೀಗ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ.

By

Published : Mar 13, 2019, 6:25 PM IST

Updated : Mar 13, 2019, 6:54 PM IST

ಮಣ್ಣಿನ ಮಡಿಕೆಗಳ ಮಾರಾಟ

ಕೋಲಾರ: ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ದಾಹ ತೀರಿಸಿಕೊಳ್ಳಲು ನಗರದ ನಿವಾಸಿಗರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ದುಬಾರಿ ಬೆಲೆ ತೆತ್ತು ದಾಹ ತೀರಿಸಿಕೊಳ್ಳಬೇಕಾದ ಜನ ಇದೀಗ ಈ ಧಗೆಯಲ್ಲಿ ನೀರನ್ನು ತಂಪಾಗಿಡುವ ಮಣ್ಣಿನ ಮಡಿಕೆಗಳತ್ತ ಮುಖ ಮಾಡಿದ್ದಾರೆ.

ಮಣ್ಣಿನ ಮಡಿಕೆಗಳ ಮಾರಾಟ

ಬಡವರ ಫ್ರಿಡ್ಜ್​ ಎಂದು ಕರೆಯಲಾಗುವ ಮಣ್ಣಿನ ಮಡಿಕೆಗಳು ನಗರದಲ್ಲಿ ಇದೀಗ ಹೆಚ್ಚಾಗಿ ಕಾಣುತ್ತಿದ್ದು, ಜನರು ಈ ಮಣ್ಣಿನ ಮಡಿಕೆಗಳನ್ನೇ ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಮಣ್ಣಿನ ಮಡಿಕೆಗಳಿಗೆ ಇದೀಗ ಭಾರೀ ಡಿಮ್ಯಾಂಡ್​ ಬಂದಿದೆ.

ಇದರಲ್ಲಿನ ನೀರು ಕುಡಿದರೆ ಯಾವುದೇ ರೋಗ ಬರುವುದಿಲ್ಲ. ಅಲ್ಲದೆ ಇಂತಹ ಮಡಿಕೆಗಳನ್ನು ಬಳಸುವುದರಿಂದ ಹಣವನ್ನು ಸಹ ಉಳಿಸಬಹುದು. ಇನ್ನು ಈ ವೃತ್ತಿಯಲ್ಲಿರುವ ಕಾರ್ಮಿಕರಿಗೂ ಇದರಿಂದ ಸ್ವಲ್ಪ ಸಹಕಾರಿಯಾಗುತ್ತದೆ ಎನ್ನುತ್ತಾರೆ ಸ್ಥಳೀಯ ಪ್ರಜ್ಞಾವಂತರು.

ಮಡಿಕೆಗಳ ವ್ಯಾಪಾರಸ್ಥ

ಸಾಮಾನ್ಯವಾಗಿ ಮಣ್ಣಿನ ಮಡಿಕೆಗಳನ್ನು ಬಳಸುವುದು ಬಡವರು ಮಾತ್ರ. ಇನ್ನು ಈ ಹಿಂದೆ ಮಣ್ಣಿನ ಮಡಿಕೆಗಳ ಬಳಕೆ ಹೆಚ್ಚಗಿಯೇ ಇತ್ತು. ಕಾಲ ಸರಿದಂತೆ ಅಲ್ಯೂಮಿನಿಯಂ ಸೇರಿದಂತೆ ಇನ್ನಿತರ ಪಾತ್ರೆಗಳು ಲಗ್ಗೆ ಇಟ್ಟಿದ್ದರಿಂದ ಮಡಿಕೆಗಳ ಬಳಕೆ ಕಡಿಮೆಯಾಗಿದೆ. ಅದಾಗ್ಯೂ ಆರೋಗ್ಯದ ಹಿತದೃಷ್ಟಿಯಿಂದ ಕೆಲವರು ಈ ಮಡಿಕೆಗಳನ್ನೇ ಅರೆಸಿ ಬರುತ್ತಿರುವುದರಿಂದ ನಮ್ಮಂತವರ ಜೀವನ ನಡೆದಿದೆ ಎನ್ನುತ್ತಾರೆ ಮಡಿಕೆ ತಯಾರಿಕ ಕೇಶವ.

Last Updated : Mar 13, 2019, 6:54 PM IST

ABOUT THE AUTHOR

...view details