ಕೋಲಾರ: ಕೋವಿಡ್ ಸಂಕಷ್ಟದ ನಡುವೆ ವಿವಾಹ ಸಮಾರಂಭಗಳು ಅತ್ಯಂತ ಸರಳವಾಗಿ ನಡೆಯುತ್ತಿದ್ದರೆ. ಇತ್ತ ಇಲ್ಲೊಬ್ಬ ಮಹಾಶಯ ಅಕ್ಕ-ತಂಗಿ ಇಬ್ಬರನ್ನೂ ವಿವಾಹವಾಗಿದ್ದಾನೆ. ಈತನ ವಿವಾಹ ಪ್ರಸಂಗವೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಕೊರೊನಾ ಸಂಕಷ್ಟದಲ್ಲೂ ಡಬಲ್ ಆಫರ್.. ಅಕ್ಕ-ತಂಗಿ ಇಬ್ಬರನ್ನೂ ವಿವಾಹವಾದ ವರ - ಕೋಲಾರ ಸುದ್ದಿ
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ, ಕಳೆದ ಮೇ 7ರಂದು ಸುಪ್ರಿಯ ಮತ್ತು ಲಲಿತ ಎಂಬ ಅಕ್ಕತಂಗಿಯರು, ಉಮಾಪತಿ ಎಂಬ ಒಬ್ಬನೇ ವರನನ್ನ ವರಿಸಿದ್ದು, ಸದ್ಯ ಈ ಜೋಡಿಯ ಮದುವೆ ಫೋಟೊಗಳು ಹಾಗೂ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.

ಅಕ್ಕ ಸುಪ್ರಿಯಾಗೆ ಮಾತು ಬರೋದಿಲ್ಲ, ತಂಗಿ ಲಲಿತಾಗೆ ಕಿವಿ ಕೇಳಿಸುವುದಿಲ್ಲ. ಒಬ್ಬರಿಗೆ ಮದುವೆಯಾದ್ರೆ ಮತ್ತೊಬ್ಬರ ಪರಿಸ್ಥಿತಿ ಹೇಗೆ ಎಂದು ಯೋಚನೆ ಮಾಡಿದ ಪೋಷಕರು ಅಕ್ಕ ತಂಗಿಯರನ್ನ, ಒಬ್ಬನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದಾರೆ. ಈ ಆಫರ್ ಕೇಳಿದ ಉಮಾಪತಿ ಸಮ್ಮತಿ ಸೂಚಿಸಿ ಇಬ್ಬರನ್ನೂ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾನೆ.