ಕೋಲಾರ: ಜಿಲ್ಲೆಯ ಹಾರೋಳ್ಳಿಯ ತಮ್ಮ ನಿವಾಸಿದಲ್ಲಿ ಮಾಸ್ಕ್, ಸ್ಯಾನಿಟೈಸರ್ ಒಳಗೊಂಡ ಸುಮಾರು 20 ಸಾವಿರ ದಿನಸಿ ಕಿಟ್‍ಗಳನ್ನು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ವಿತರಿಸಿದರು.
20 ಸಾವಿರ ದಿನಸಿ ಕಿಟ್ ವಿತರಿಸಿದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ - Grocery Kit distribution to poor people in kolar
ಲಾಕ್ಡೌನ್ ಹಿನ್ನೆಲೆ ಆಹಾರಕ್ಕಾಗಿ ಪರದಾಡುತ್ತಿರುವ ಜನರಿಗೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಸುಮಾರು 20 ಸಾವಿರ ಕಿಟ್‍ಗಳನ್ನು ವಿತರಿಸಿದರು. ಕೋಲಾರ ಜಿಲ್ಲೆ ಹಾರೋಹಳ್ಳಿಯ ತಮ್ಮ ನಿವಾಸದಲ್ಲಿ ದಿನಸಿ ಕಿಟ್ ವಿತರಿಸಿದರು.
![20 ಸಾವಿರ ದಿನಸಿ ಕಿಟ್ ವಿತರಿಸಿದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ grocery-kit-distribution-to-poor-people-in-kolar](https://etvbharatimages.akamaized.net/etvbharat/prod-images/768-512-6989125-110-6989125-1588158888112.jpg)
ಈಗಾಗಲೇ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 70 ಸಾವಿರ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ಇಂದು ಸಹ 20 ಸಾವಿರ ಕಿಟ್ಗಳನ್ನ ವಿತರಿಸಲಾಗುತ್ತಿದೆ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸುವಂತೆ ಮನವಿ ಮಾಡಿದರು.
ದೇಶದಲ್ಲಿ ಶೇಕಡಾ 35ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದು, ಅಂತಹವರಿಗೆ ಸಮಸ್ಯೆಯಾಗದಂತೆ ಆಯಾ ರಾಜ್ಯ ಸರ್ಕಾರಗಳು ಎಚ್ಚರ ವಹಿಸಬೇಕು. ಪ್ರಧಾನಿಗಳ ಮನವಿಯಂತೆ ಸಂಸದರು ತಮ್ಮ ವೇತನದ ಶೇಕಡಾ 30ರಷ್ಟು ಹಣವನ್ನು ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದಾರೆ. ನಾನೂ ಕೂಡ ನನ್ನ ನಿವೃತ್ತ ವೇತನದಲ್ಲಿ ಶೇಕಡಾ 30ರಷ್ಟು ನೀಡುವಂತೆ ತಿಳಿಸಿದ್ದೇನೆ ಎಂದರು.