ಕರ್ನಾಟಕ

karnataka

ETV Bharat / state

ಚುನಾವಣಾಧಿಕಾರಿ ಎಡವಟ್ಟು.. ಕ್ಯಾಸಂಬಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ

ಇಷ್ಟೆಲ್ಲಾ ಗೊಂದಲ, ಹೈಡ್ರಾಮಾದಿಂದ ಕ್ಯಾಸಂಬಳ್ಳಿ ಗ್ರಾಪಂ ವಿವಾದದ ಕೇಂದ್ರ ಬಿಂದುವಾಗಿದೆ. 20 ಸದಸ್ಯ ಬಲದ ಪೈಕಿ 19 ಬಿಜೆಪಿ ಬೆಂಬಲಿತ ಹಾಗೂ 3 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಪಂಚಾಯತ್​ ಸಂಪೂರ್ಣ ಬಿಜೆಪಿ ಪಾಲಾಗಬೇಕು. ಆದ್ರೆ, ಮಾಜಿ ಬಿಜೆಪಿ ಶಾಸಕರಾದ ವೈ.ಸಂಪಂಗಿ ಹಾಗೂ ಎಂ.ನಾರಾಯಣಸ್ವಾಮಿಗೆ ಪಂಚಾಯತ್​ ಪ್ರತಿಷ್ಠೆಯಾಗಿದೆ..

ಕ್ಯಾಸಂಬಳಿ ಗ್ರಾಮ ಪಂಚಾಯತಿ
ಕ್ಯಾಸಂಬಳಿ ಗ್ರಾಮ ಪಂಚಾಯತಿ

By

Published : Feb 9, 2021, 9:01 PM IST

ಕೋಲಾರ :ಚುನಾವಣಾ ಅಧಿಕಾರಿ ಮಾಡಿದ ಎಡವಟ್ಟಿನಿಂದಾಗಿ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣಾ ಮುಂದೂಡಿರುವ ಘಟನೆ ನಡೆದಿದೆ.

ಈ ಗ್ರಾಪಂನಲ್ಲಿ 20 ಸದಸ್ಯ ಸ್ಥಾನಗಳಿವೆ. ನಿನ್ನೆ ಚುನಾವಣೆ ನಿಗದಿಯಾಗಿತ್ತು. ಆ ಮೂಲಕ ಚುನಾವಣಾಧಿಕಾರಿ ದಿನೇಶ್ ಚುನಾವಣೆ ನಡೆಸಿಕೊಟ್ಟರು. ಆದರೆ, ಚುನಾವಣಾಧಿಕಾರಿ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಕೆಲಕಾಲ ಗೊಂದಲ ಉಂಟಾಯ್ತು, ಬಳಿಕ ಹೈಡ್ರಾಮ ನಡೆದಿತ್ತು. 20 ಸದಸ್ಯರಿಗೆ ತಲಾ ಒಂದೊಂದು ಮತಪತ್ರ ನೀಡಬೇಕಾದ ಅಧಿಕಾರಿ ಬದಲಿಗೆ 21 ಬ್ಯಾಲೆಟ್‌ಗಳನ್ನು ನೀಡಿ ಎಡವಟ್ಟು ಮಾಡಿದ್ದರು.

ಪರಿಣಾಮ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಶ್ವಿನಿಗೆ 21 ಮತ ಬಂದಿತ್ತು. ಆದರೆ, ಉಪಾಧ್ಯಕ್ಷೆ ಸ್ಥಾನದ ಅಂಜಲಿಗೆ 19 ಮತ ಬಂದಿತ್ತು. ಹೀಗಾಗಿ, ಪಂಚಾಯತ್​ ಕಚೇರಿಯಲ್ಲಿ ಗೊಂದಲ ಸೃಷ್ಟಿಯಾಗಿ ಚುನಾವಣೆ ಮುಂದೂಡಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದೆಲ್ಲಾ ಪಕ್ಷದ ಕೆಲ ಮುಖಂಡರ ಒತ್ತಡಕ್ಕೆ ಮಣಿದು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಬುದು ಸದಸ್ಯರ ಆರೋಪವಾಗಿತ್ತು.

ಇಷ್ಟೆಲ್ಲಾ ಗೊಂದಲ, ಹೈಡ್ರಾಮಾದಿಂದ ಕ್ಯಾಸಂಬಳ್ಳಿ ಗ್ರಾಪಂ ವಿವಾದದ ಕೇಂದ್ರ ಬಿಂದುವಾಗಿದೆ. 20 ಸದಸ್ಯ ಬಲದ ಪೈಕಿ 19 ಬಿಜೆಪಿ ಬೆಂಬಲಿತ ಹಾಗೂ 3 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಪಂಚಾಯತ್​ ಸಂಪೂರ್ಣ ಬಿಜೆಪಿ ಪಾಲಾಗಬೇಕು. ಆದ್ರೆ, ಮಾಜಿ ಬಿಜೆಪಿ ಶಾಸಕರಾದ ವೈ.ಸಂಪಂಗಿ ಹಾಗೂ ಎಂ.ನಾರಾಯಣಸ್ವಾಮಿಗೆ ಪಂಚಾಯತ್​ ಪ್ರತಿಷ್ಠೆಯಾಗಿದೆ.

ಹಾಗಾಗಿ, ಸಂಪಂಗಿ ಬಣದವರು ಯಾವುದೇ ಕಾರಣಕ್ಕೂ ಅಧ್ಯಕ್ಷ-ಉಪಾಧ್ಯಕ್ಷರಾಗಬಾರದು ಅನ್ನೋ ಕಾರಣಕ್ಕೆ ನಾರಾಯಣಸ್ವಾಮಿ ಕಾಂಗ್ರೆಸ್​ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಮಧ್ಯೆ ಚುನಾವಣಾಧಿಕಾರಿಯಾಗಿದ್ದ ದಿನೇಶ್ ಎಂಬುವರು ಕೂಡ ಮುಖಂಡರ ಒತ್ತಡಕ್ಕೆ ಮಣಿದಿದ್ದಾರೆ.

ಹಾಗಾಗಿ, ಇಷ್ಟೆಲ್ಲಾ ಹೈಡ್ರಾಮ ನಡೆಸಿದ್ದಾರೆ. ತಾವು ಮಾಡಿದ ಎಡವಟ್ಟು ತಿಳಿಯುತ್ತಿದ್ದಂತೆ ಎದೆನೋವು ಎಂದು ದಿನೇಶ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಈ ಬಳಿಕ ಎಡವಟ್ಟನ್ನ ಒಪ್ಪಿಕೊಂಡಿರುವ ಚುನಾವಣಾಧಿಕಾರಿ ದಿನೇಶ್ ಅನಾರೋಗ್ಯದ ಹಿನ್ನೆಲೆ ಈ ರೀತಿ ಆಗಿರುವುದು ನಿಜ ಎಂದಿದ್ದಾರೆ.

ಹಾಗಾಗಿ, ಚುನಾವಣೆ ಮುಂದೂಡಿದ್ದೇವೆ. ಆದಷ್ಟು ಬೇಗ ದಿನಾಂಕ ನಿಗದಿ ಮಾಡುತ್ತೇವೆ ಎಂದೂ ಸಹ ಹೇಳಿದ್ದಾರೆ. ರಾಜಕೀಯ ನಾಯಕರ ಪ್ರತಿಷ್ಠೆ, ಗುಂಪುಗಾರಿಕೆಯಿಂದ ಕ್ಯಾಸಂಬಳ್ಳಿ ಚುನಾವಣೆ ಮುಂದೂಡಿದ್ದು, ಶ್ರೀನಿವಾಸ ಸಂದ್ರ ಪಂಚಾಯತ್​ ಕೂಡ ಇದಕ್ಕೆ ಸೇರ್ಪಡೆಯಾಗಿದೆ.

ABOUT THE AUTHOR

...view details