ಕೋಲಾರ: ಕೊರೊನಾ ಕುರಿತು ನಡೆಯುತ್ತಿದ್ದ ಸಭೆ ಬಹಿಷ್ಕರಿಸಿ ಶಾಸಕರೊಬ್ಬರು ಹೊರ ನಡೆದ ಘಟನೆ ಕೋಲಾರದಲ್ಲಿ ನಡೆದಿದೆ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ: ಶಾಸಕ ನಾರಾಯಣಸ್ವಾಮಿ ಆರೋಪ - Bangarapet MLA .N.arayanaswamy allegation
ಕೋಲಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ: ಶಾಸಕ ಎಸ್.ಎನ್. ನಾರಾಯಣಸ್ವಾಮಿ
ಕೋಲಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು. ಅಲ್ಲದೇ ಇಲ್ಲಿ ಅಧಿಕಾರಿಗಳು ಹೇಳುವ ಮಾಹಿತಿಗೂ ವಾಸ್ತವವಾಗಿ ಸ್ಥಳದಲ್ಲಿರುವ ಅಂಕಿ-ಅಂಶಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ಶಾಸಕ ರಮೇಶ್ ಕುಮಾರ್ ಸಮಾಧಾನಪಡಿಸಲು ಹೋದಾಗ, ಆಕ್ರೋಶಗೊಂಡ ಶಾಸಕ ನಾರಾಯಣಸ್ವಾಮಿ ಸಭೆಯಿಂದ ಏಕಾಏಕಿ ಎದ್ದು ಹೊರ ನಡೆದಿದ್ದಾರೆ.