ಕೋಲಾರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಇಲ್ಲಿನ ಗಲ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ, 32 ಲಕ್ಷ ರೂ. ಮೌಲ್ಯದ ಸುಮಾರು 90 ಕೆಜಿ ಒಣ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಅಕ್ರಮವಾಗಿ ಗಾಂಜಾ ಸಾಗಾಟ: ಒಬ್ಬನನ್ನು ಬಂಧಿಸಿದ ಗಲ್ಪೇಟೆ ಪೊಲೀಸರು - ಗಾಂಜಾ ಅಕ್ರಮ ಸಾಗಾಟ
ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೋಲಾರದ ಗಲ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಗಲ್ಪೇಟೆ ಪೊಲೀಸರು
ಕೋಲಾರದ ವ್ಯಕ್ತಿಗೆ ಮಾರಾಟ ಮಾಡಲು ತಂದಿದ್ದ ವೇಳೆ ಮಾಹಿತಿ ಪಡೆದ ಗಲ್ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇನ್ನು ಕೋಲಾರ ಹೊರವಲಯದ ಟಮಕ ಅಗ್ನಿಶಾಮಕ ದಳದ ಕಚೇರಿ ಬಳಿ ಇರುವಂತಹ ಹಳೆಯ ಗ್ರಾನೈಟ್ ಫ್ಯಾಕ್ಟರಿ ಮುಂಭಾಗ ಈ ಗಾಂಜಾಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಗಲ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.