ಕೋಲಾರ:ನೂರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್ ಸೇರಿ ನಾಲ್ವರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಇಟಿಸಿಎಂ ಆಸ್ಪತ್ರೆ ಮಾಜಿ ಲೆಕ್ಕಾಧಿಕಾರಿ ಜಾನ್ಸನ್ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಶಾಂತಕುಮಾರ್ ಹಾಗೂ ನಕಲಿ ಪ್ರಕರಣದಲ್ಲಿ ಭಾಗಿಯಾದ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಇಟಿಸಿಎಂ ಆಸ್ಪತ್ರೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್ ಎಂಬುವರು ಈ ಹುನ್ನಾರ ನಡೆಸಿದ್ದರು. ಶಾಂತಕುಮಾರ್ ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್ ಹಾಗೂ ಮಂಜು, ಹಾಸ್ಟೆಲ್ ವಾರ್ಡನ್ ಶೀಲಾ ಎಂಬ ಮಹಿಳೆಯರ ಮೂಲಕ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 30ರಂದು ದೂರು ನೀಡಿದ್ದರು.