ಕರ್ನಾಟಕ

karnataka

ETV Bharat / state

ಕೊರೊನಾದಿಂದ ಮೃತಪಟ್ಟವರ ಅಮಾನವೀಯ ಅಂತ್ಯಸಂಸ್ಕಾರ: ರಮೇಶ್ ಕುಮಾರ್ ಕಿಡಿ - Former Speaker Ramesh Kumar statement

ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಮಾನವೀಯ ಅಂತ್ಯಸಂಸ್ಕಾರದ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ರು.

The inhuman funeral of the deceased from Corona
ಮಾಜಿ ಸ್ಪೀಕರ್ ರಮೇಶ್ ಕುಮಾರ್

By

Published : Jul 3, 2020, 4:19 PM IST

ಕೋಲಾರ:ಕೊರೊನಾದಿಂದ ಸಾವನ್ನಪ್ಪಿದ್ದವರನ್ನು ಪ್ರಜ್ಞೆ ಇಲ್ಲದೆ ಅಮಾನುಷವಾಗಿ ಅಂತ್ಯಸಂಸ್ಕಾರ ಮಾಡಿರುವಂತಹದ್ದು ಅಮಾನವೀಯ ಎಂದು ಮಾಜಿ ಸ್ಪೀಕರ್, ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅಸಮಧಾನ ವ್ಯಕ್ತಪಡಿಸಿದ್ರು.

ಜನರಿಗೆ ಜಾಗೃತಿ ಮೂಡಿಸುವ ಬದಲಾಗಿ ಹೆದರಿಕೆ ಹುಟ್ಟಿಸುತ್ತಿದ್ದಾರೆ, ಎಲ್ಲರಿಗೂ ಪ್ರಾಣ ಎಂದರೆ ಉಳಿಸಿಕೊಳ್ಳಬೇಕೆಂಬ ಆಸೆ ಇರುತ್ತೆ, ಆದ್ರೆ ನಮ್ಮಲ್ಲಿ ಮಾನವೀಯತೆ ಸತ್ತು ಹೋಗಿದೆ. ಕಾಯಿಲೆಗಿಂತ ಹೆಚ್ಚು ಕ್ರೌರ್ಯ ನಮ್ಮಲ್ಲಿದೆ ಎಂದು ಕಿಡಿಕಾರಿದ್ರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್

ಸರ್ಕಾರಕ್ಕೆ ಮಾನವೀಯತೆ ಇಲ್ಲ, ನಾವು ಮನುಷ್ಯರಂತೆ ವರ್ತಿಸಬೇಕು. ನನ್ನ ರಕ್ತ ಸಂಬಂಧಿಗಳು ಯಾರಾದ್ರೂ ಹೀಗೆ ಆದ್ರೆ ಹೇಗೆ ಅನ್ನೋ ಪ್ರಜ್ಞೆ ಸರ್ಕಾರಕ್ಕೆ ಇರಬೇಕು ಎಂದರು.

ಇನ್ನು ನಾನು ಮಂತ್ರಿ, ಸರ್ಕಾರ ಅನ್ನೋದನ್ನು ಬಿಡಬೇಕಿದೆ, ಯಾವಾಗಲೂ ರಾಜಕಾರಣಿಗಳಿಗೆ ಅಧಿಕಾರ ಇರುವುದಿಲ್ಲ, ರಾಜಕಾರಣಿಗಳಿಗೆ ಜವಾಬ್ದಾರಿ ಇರಬೇಕು, ಜವಾಬ್ದಾರಿಯಿಂದ ನಡೆದುಕೊಳ್ಳದೆ ಹೋದರೆ ಏನು ಮಾಡೋಕೆ ಆಗುತ್ತೆ ಇದೊಂದು ನಮ್ಮ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ್ರು.

ABOUT THE AUTHOR

...view details