ಕೋಲಾರ: ಪ್ರತಿಭಟನಾಕಾರರಿಗೆ ಮಾಜಿ ಸ್ಪೀಕರ್ ಅವರ ಭಾಷಣ ಪ್ರಚೋದನೆಯಾಗಬಹುದು ಅಥವಾ ಪ್ರಾಣ ಹಾನಿಯಾಗಬಹುದು ಎಂಬ ಕಾರಣಕ್ಕಾಗಿ ರಮೇಶ್ ಕುಮಾರ್ ಅವರನ್ನು ಬಂಧಿಸಿರಬಹುದು ಎಂದು ಶಾಸಕ ಎಚ್.ನಾಗೇಶ್ ಹೇಳಿದರು.
'ಪ್ರಚೋದನೆಗೆ, ಪ್ರಾಣಹಾನಿಗೆ ಅವಕಾಶ ನೀಡದಿರಲು ಮಾಜಿ ಸ್ಪೀಕರ್ ಬಂಧನ' - ಶಾಸಕ ಎಚ್.ನಾಗೇಶ್
ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.
ಶಾಸಕ ಎಚ್.ನಾಗೇಶ್
ಇಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ರತಿಭಟನೆಯಿಂದಾಗಿ ಮಂಗಳೂರಿನಲ್ಲಿ ಪ್ರಾಣಹಾನಿಯಾಗಿದೆ. ಅಲ್ಲದೆ, ಪ್ರತಿಭಟನೆಯಿಂದ ಅಮಾಯಕರನ್ನು ಕಳೆದುಕೊಂಡಿದ್ದೇವೆ. ಇದರಿಂದ ಅವರ ಕುಟುಂಬಸ್ಥರಿಗೆ ತುಂಬಲಾರದ ನೋವಾಗಿದೆ. ಹೀಗಾಗಿ ಇಂಥ ಘಟನೆಗಳು ಮರುಕಳಿಸಬಾರದು ಎಂದು ರಮೇಶ್ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು ಒಳ್ಳೆಯದೇ ಆಯಿತು ಎಂದರು.