ಕೋಲಾರ:ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಸಂಸ್ಕಾರ ಹಾಗೂ ಸಭ್ಯತೆ ಇಲ್ಲ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಶಾಸಕ ಎಸ್.ಎನ್. ನಾರಾಯಣ ಸ್ವಾಮಿಗೆ ಸಂಸ್ಕಾರ, ಸಭ್ಯತೆ ಇಲ್ಲ: ಮಾಜಿ ಶಾಸಕ ಟೀಕೆ - MLA Narayanaswamy
ಟಿಪಿಸಿಎಂಎಸ್ ವಾರ್ಷಿಕ ಸಭೆಯಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಜಟಾಪಟಿ, ಬೆಂಬಲಿಗರ ಮಾರಾಮಾರಿ ವಿಚಾರಕ್ಕೆ ಸಂಭಂದಿಸಿದಂತೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ನಡೆದ ಟಿಪಿಸಿಎಂಎಸ್ ವಾರ್ಷಿಕ ಸಭೆಯಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಜಟಾಪಟಿ, ಬೆಂಬಲಿಗರ ಮಾರಾಮಾರಿ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಾಲಿ ಶಾಸಕರಿಗೆ ಸೊಸೈಟಿಯ ಕಾನೂನು ಅರಿವಿಲ್ಲ, ಅವರ ಬೆಂಬಲಿಗರನ್ನ ಎತ್ತಿಕಟ್ಟಿ ವೇದಿಕೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆಂದು ಆರೋಪಿಸಿದರು.
ಅಲ್ಲದೆ ಏಕವಚನ ಪ್ರಯೋಗ ಮಾಡುವುದರ ಮೂಲಕ ಅವರ ಸಂಸ್ಕಾರವನ್ನ ತೋರಿದ್ದಾರೆ. ಜೊತೆಗೆ ಪ್ರಧಾನಿ ಹಾಗೂ ಗೃಹಮಂತ್ರಿಗಳನ್ನ ಏಕವಚನದಲ್ಲಿ ನೀಚ ಭಾಷೆಯಲ್ಲಿ ಮಾತನಾಡುವುದು ಅವರ ಸಭ್ಯತೆಯನ್ನ ತೋರುತ್ತದೆ ಎಂದು ಟೀಕಿಸಿದ್ರು. ಅಲ್ಲದೆ ಆರು ವರ್ಷಗಳ ಹಿಂದೆ ಮಾಡಿರುವ ಯೋಜನೆಗಳು ತಮ್ಮದೆ ಎಂದು ಹೇಳಿಕೊಳ್ಳುತ್ತಿರುವ ಶಾಸಕರು ತಾಕತ್ ಇದ್ದರೆ ಕ್ಷೇತ್ರಕ್ಕೆ ಅನುದಾನಗಳನ್ನ ತರಿಸಿ ತೋರಿಸಲಿ ಎಂದು ಸವಾಲು ಎಸೆದ್ರು.