ಕೋಲಾರ: ಮುಳಬಾಗಿಲು ತಾಲೂಕಿನಲ್ಲಿನ ಕಂಟೇನ್ಮೆಂಟ್ ಪ್ರದೆಶದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.
ಮುಳಬಾಗಿಲಿನ ಕಂಟೇನ್ಮೆಂಟ್ ಪ್ರದೇಶದಲ್ಲಿ ಮಾಜಿ ಶಾಸಕರಿಂದ ದಿನಸಿ ಕಿಟ್ ವಿತರಣೆ - latest news for kottur manjunath
ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ.ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ. ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದ್ರು.
ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮೂಲಕ ಆ ಗ್ರಾಮಗಳಿಗೆ ಮಾಜಿ ಶಾಸಕರು ಸಾಮಗ್ರಿಗಳನ್ನು ತಲುಪಿಸಿದರು. ಈ ಸಂರ್ದದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಜನರು ಮನೆಯಿಂದ ಹೊರ ಬಾರದಂತೆ ಹೇಳಿದರು. ಕೊತ್ತೂರು ಮಂಜುನಾಥ್ ಲಾಕ್ಡೌನ್ ಆದ ದಿನದಿಂದ ಇಲ್ಲಿಯವರೆಗೆ ಸುಮಾರು 75 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.