ಕರ್ನಾಟಕ

karnataka

ETV Bharat / state

'ಕೈ'ಹಿಡಿದು ಸಿದ್ದರಾಮಯ್ಯ ದಾರಿಯಲ್ಲಿ ನಡೆಯುವೆ.. ಮಾಜಿ ಸಚಿವ ವರ್ತೂರ್​ ಪ್ರಕಾಶ್​ - Vartoor Prakash

ಸಿದ್ದರಾಮಯ್ಯ ಹೋಗುವ ದಾರಿಯಲ್ಲಿ ನಾನು ಹೋಗುತ್ತೇನೆ. ಅವರು ಮೀಸಲಾತಿ ಹೋರಾಟಕ್ಕೆ ಹೋಗಿಲ್ಲ, ಅದಕ್ಕೆ ನಾನೂ ಕೂಡ ಹೋಗಿಲ್ಲ. ಅಹಿಂದ ಸಮಾವೇಶ ಮಾಡೋದಾದ್ರೆ ಕೋಲಾರದಿಂದಲೇ 2 ರಿಂದ 3 ಲಕ್ಷ ಜನರನ್ನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇನೆ..

Former minister Vartur Prakash
ಮಾಜಿ ಸಚಿವ ವರ್ತೂರ್ ಪ್ರಕಾಶ್

By

Published : Feb 15, 2021, 8:20 PM IST

ಕೋಲಾರ :ನಾನು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದೇನೆ ಎಂದು‌ ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳಿದ್ದಾರೆ.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ರಾಜ್ಯ ಮುಖಂಡರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್​ ಸೇರ್ಪಡೆ ಆಗುವವರೆಗೂ ನಾನು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಮತ್ತೆ ಎಂಎಲ್‌ಎ ಆಗಬೇಕು, 10 ವರ್ಷ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್​ನಲ್ಲಿಯೂ ಇರಬೇಕು ಎಂಬ ಆಸೆ ಇದೆ ಎಂದರು.

ಕಾಂಗ್ರೆಸ್‌ ಪಕ್ಷ ಸೇರುವ ಕುರಿತಂತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತು..

ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ 18ರಲ್ಲಿ ನಾವು 12 ಗ್ರಾಪಂಗಳನ್ನ ನಮ್ಮ ತೆಕ್ಕೆಗೆ ತೆಗೆದುಕೊಂಡಿದ್ದೇವೆ. ಗೆದ್ದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಫೆಬ್ರವರಿ 21ಕ್ಕೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದೇನೆ ಎಂದರು.

ABOUT THE AUTHOR

...view details