ಕೋಲಾರ: ಕಾಂಗ್ರೆಸ್ ಸೇರುವ ಅವಶ್ಯಕತೆ ನನಗಿಲ್ಲ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮಾದರಿಯಲ್ಲಿ ಕೋಲಾರದಲ್ಲಿ ಗೆಲ್ಲುತ್ತೇನೆ. ಆಗ ಕಾಂಗ್ರೆಸ್ನವರು ರತ್ನ ಗಂಬಳಿ ಹಾಕಿ ಸ್ವಾಗತಿಸುತ್ತಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ಕೋಗಿಲಹಳ್ಳಿ ನಿವಾಸದ ಬಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಅಧ್ಯಕ್ಷ - ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಸೇರ್ಪಡೆಗೆ ಸಿದ್ದರಾಮಯ್ಯ, ರಮೇಶ್ ಕುಮಾರ್ ಅಡ್ಡಗಾಲು ಹಾಕಿಲ್ಲ. ಅಡ್ಡಗಾಲಾಗಿರುವುದು ಕೆ.ಎಚ್.ಮುನಿಯಪ್ಪ ಎಂದ ಅವರು, ಕಟುಕರು ಕೂಡ ನೀರು ಹಾಕಿ ಕುರಿ ಕೊಯ್ಯುತ್ತಾರೆ. ಆದ್ರೆ, ಕೆ.ಎಚ್.ಮುನಿಯಪ್ಪ ನೀರಿಲ್ಲದೇ ಕತ್ತು ಕೊಯ್ಯುತ್ತಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿದರು ತಮ್ಮ ಭಾಷಣದ ಉದ್ದಕ್ಕೂ ಮುನಿಯಪ್ಪ ವಿರುದ್ದ ವಾಗ್ದಾಳಿ ನಡೆಸಿದ ಅವರು, ಶಾಸಕ ಶ್ರೀನಿವಾಸಗೌಡರಿಗೆ ಬುದ್ದಿ ಭ್ರಮಣೆ ಇಲ್ಲ, ಕೆ.ಎಚ್.ಮುನಿಯಪ್ಪಗೆ ಬುದ್ದಿ ಭ್ರಮಣೆ ಎಂದ ಅವರು, 7 ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆದ್ದಿದೆ ಅಂತಾರೆ. ಎಲ್ಲಿದೆ ತೋರಿಸಿ? ಎಂದು ಸವಾಲು ಹಾಕಿದರು.
ಓದಿ:ಟೂಲ್ಕಿಟ್ ವಿವಾದ ಪ್ರಕರಣ: ದಿಶಾ ರವಿಗೆ ಷರತ್ತು ಬದ್ಧ ಜಾಮೀನು
ಬಾಡೂಟ ಆಯೋಜನೆ: ಕೋಗಿಲೆಹಳ್ಳಿಯ ತಮ್ಮ ನಿವಾಸದ ಬಳಿ ವರ್ತೂರು ಪ್ರಕಾಶ್ ಸುಮಾರು 1,250 ಕೆ.ಜಿ ಚಿಕನ್ ಬಿರಿಯಾನಿ ಮಾಡಿಸಿದ್ರು. ಈ ವೇಳೆ, ಬಿರಿಯಾನಿಗಾಗಿ ಕಾರ್ಯಕರ್ತರು ಮುಗಿ ಬಿದ್ದ ಪ್ರಸಂಗವೂ ನಡೆಯಿತು. ಎಂದಿನಂತೆ ಬಿರಿಯಾನಿಗಾಗಿ ಪ್ಲೇಟ್‌ಗಳನ್ನ ಹಿಡಿದು ತಾ ಮುಂದು ನಾ ಮುಂದು ಎಂದು ಕಾರ್ಯಕರ್ತರು ಮುಗಿಬಿದ್ದರು. ಇದೇ ವೇಳೆ ಮಾತನಾಡಿದ ಮುಖಂಡರು, ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನ ಮತ್ತೆ ಶಾಸಕರಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಅವರನ್ನ ಗೆಲ್ಲಿಸುವ ಮೂಲಕ ಮತ್ತೆ ಕೋಲಾರದಲ್ಲಿ ಹಿಂದಿನ ಆಡಳಿತ ತರಬೇಕು ಎಂದು ಕರೆ ನೀಡಿದರು.