ಕರ್ನಾಟಕ

karnataka

ETV Bharat / state

ಆಹಾರ ಕಿಟ್​​ವಿತರಣೆಗೆ ಚಾಲನೆ ನೀಡಿದ ಹೆಚ್​ಡಿಕೆ : ಕೆಲ ಅಧಿಕಾರಗಳ ವಿರುದ್ದ ಗರಂ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಆಹಾರದ ಕಿಟ್​ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಹಡೆಚ್​. ಡಿ. ಕುಮಾರಸ್ವಾಮಿ. ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ.

former-cm-kumaraswamy
ಆಹಾರದ ಕಿಟ್​​ವಿತರಣೆಗೆ ಚಾಲನೆ ನೀಡಿದ ಹೆಚ್​ಡಿಕೆ

By

Published : May 1, 2020, 9:53 PM IST

ಕೋಲಾರ : ಜಿಲ್ಲೆಯ ಮುಳುಬಾಗಿಲಿನಲ್ಲಿ ಮಾಜಿ ಸಿಎಂ ಹೆಚ್​. ಡಿ.ಕುಮಾರಸ್ವಾಮಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕಿಟ್​ಗಳನ್ನು ವಿತರಣೆ ಮಾಡಿದರು.

ಇದೇ ವೇಳೆ, ಮಾತನಾಡಿದ ಅವರು, ಸರ್ಕಾರಕ್ಕೆ ಲಾಕ್​ಡೌನ್ ಮೇಲಿರುವ ಕಾಳಜಿ, ರೈತರ ಮೇಲೆ ಇಲ್ಲ. ಜನ ಸಾಮಾನ್ಯರ ನೋವಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ, ಮಂಡ್ಯಕ್ಕೆ ಮುಂಬೈನಿಂದ ಶವ ತಂದ ವಿಚಾರವಾಗಿ ಮಾತನಾಡಿ ಅವರು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ, ಇಂಥ ಸಂದರ್ಭದಲ್ಲಿ ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೇ ಹೇಗೆ ಮಂಡ್ಯಗೆ ತಂದರು? ಮಹಾರಾಷ್ಟ್ರದಿಂದ ಇಲ್ಲಿಗೆ ತರಲು ಅವಕಾಶ ಕೊಟ್ಟವರು ಯಾರು ? ಮಂಡ್ಯದಲ್ಲಿ 8 ಜನರಿಗೆ ಪಾಸಿಟಿವ್ ಬಂದಿದೆ. ಇವೆಲ್ಲ ಜಿಲ್ಲಾಧಿಕಾರಿಗಳ ಗಮನಕ್ಕೆ ಇರಲಿಲ್ವಾ.? ಎಂದು ಪ್ರಶ್ನಿಸಿದ್ರು. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು. ಕೆಲ ಜನರು ಮುಂಬೈನಿಂದ ಬಂದಿದ್ದಾರೆ, ಅವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು. .

ಆಹಾರದ ಕಿಟ್​​ವಿತರಣೆಗೆ ಚಾಲನೆ ನೀಡಿದ ಹೆಚ್​ಡಿಕೆ

ಮೇ.3 ರ ಬಳಿಕ ಲಾಕ್ ಡೌನ್ ಮುಂದುವರಿಸುವ ಕುರಿತು ಮಾತನಾಡಿದ ಹೆಚ್​ಡಿಕೆ, ಲಾಕ್​ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ. ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ರಿಯಾಯಿತಿ ನೀಡಿದರೆ ಡ್ಯಾಮೇಜ್ ಆಗುತ್ತೆ ಅಂತ ಹಲವಾರು ಜನರು ಹೇಳಿದ್ದಾರೆ. ಮೇ 18 ನೇ ತಾರೀಖು ಒಳಗೆ ಇಡೀ ದೇಶದಲ್ಲಿ 38 ಸಾವಿರ ಜನ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಜನರ ಜೀವದ ಜೊತೆ ಚಲ್ಲಾಟವಾಡದೇ ಸರ್ಕಾರ ತೀರ್ಮಾನ ಮಾಡಬೇಕು ಎಂದರು.

ಈಗಾಗಲೇ ಕೆಲ ಚಟುವಟಿಕೆಗಳಿಗೆ ರಿಲ್ಯಾಕ್ಸ್​ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದ್ರು. ಇನ್ನು ಸರ್ಕಾರವು ದುಂದುವೆಚ್ಚ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details