ಕೋಲಾರ: ತಾವು ಸಿಎಂ ಆಗಿದ್ದಾಗ ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಅವರು ಹಣವನ್ನು ಸಿದ್ದರಾಮನ ಹುಂಡಿಯಿಂದ ತಂದಿದ್ದರಾ?, ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಜತೆಗೆ ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಟ್ಟದ್ದೇನೆ. ನಾನು ಮಾಡಿದ ಯೋಜನೆಗಳಿಗೆ ಸರ್ಕಾರದ ಹಣವನ್ನೇ ಕೊಟ್ಟಿರುವುದು. ನನ್ನ ಮನೆಯಿಂದ ತಂದುಕೊಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಹಲವು ಭಾಗ್ಯಗಳಿಗೆ ‘ಸಿದ್ದರಾಮನ ಹುಂಡಿ’ಯಿಂದ ಹಣ ತಂದಿದ್ರಾ?: ಹೆಚ್ಡಿಕೆ - Former CM HDKumaraswamy tang to Siddaramaiah
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಮಾಡಿದ ಯೋಜನೆಗಳಿಗೆ ಸರ್ಕಾರದ ಹಣವನ್ನೇ ಕೊಟ್ಟಿರುವುದು. ನನ್ನ ಮನೆಯಿಂದ ತಂದುಕೊಟ್ಟಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯಗೆ ಹೆಚ್ಡಿಕೆ ಟಾಂಗ್
ಇತ್ತೀಚೆಗೆ ಮೈಸೂರಿನಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಸಾಲ ಮನ್ನಾ ಮಾಡಿದ್ದು ಹಾಗೂ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಟ್ಟ ಕುಮಾರಸ್ವಾಮಿ ಅವರ ಮನೆಯಿಂದ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಅದನ್ನು ಸರ್ಕಾರದ ಹಣದಿಂದಲೇ ಮಾಡಿರುವುದು ಎಂದು ಹೇಳಿದರು.