ಕರ್ನಾಟಕ

karnataka

ETV Bharat / state

ಕಿಡಿಗೇಡಿಗಳ ಕೃತ್ಯಕ್ಕೆ ನಾಶವಾದ ಅರಣ್ಯ ! ಜೀವ ಸಂಕುಲಕ್ಕೆ ಭಾರಿ ಪೆಟ್ಟು! - ಅರಣ್ಯ ಪ್ರದೇಶ

ಇಂದು ಮಧ್ಯಾಹ್ನ ಕೋಲಾರದ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಅಪಾರ ಪ್ರಮಾಣದ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲ ನಾಶವಾಗಿದೆ.

ಬೆಂಕಿ

By

Published : Apr 1, 2019, 6:50 PM IST

ಕೋಲಾರ:ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಮಡೇರಹಳ್ಳಿ ಅರಣ್ಯ ಪ್ರದೇಶ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಗಿಡ-ಮರಗಳು ಸೇರಿದಂತೆ ಪ್ರಾಣಿ-ಪಕ್ಷಿಗಳು, ಕ್ರಿಮಿ-ಕೀಟಗಳು ಬೆಂಕಿಗಾಹುತಿಯಾಗಿವೆ.

ಇಂದು ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಇಷ್ಟೆಲ್ಲ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲ ನಾಶವಾಗಿದೆ.

ಬೆಂಕಿಗಾಹುತಿಯಾದ ಅರಣ್ಯ ಪ್ರದೇಶ

ಇದನ್ನ ಗಮನಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಆ ಹೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಹತ್ತಾರು ಎಕರೆ ಅರಣ್ಯ ಭೂಮಿಗೆ ವ್ಯಾಪಿಸಿ ಅಪಾರ ಪ್ರಮಾಣದ ಸಂಪತ್ತು ಬೆಂಕಿಗಾಹುತಿಯಾಗಿದೆ. ಅಚ್ಚರಿ ಎಂಬಂತೆ ಪಕ್ಕದಲ್ಲೆ ಇದ್ದ ಅರಣ್ಯ ಇಲಾಖೆ ನರ್ಸರಿ ಅದೃಷ್ಟವಶಾತ್ ಬೆಂಕಿಯಿಂದ ಪಾರಾಗಿದೆ.

ABOUT THE AUTHOR

...view details