ಕೋಲಾರ:ಎರಡು ಗುಂಪುಗಳ ನಡುವಿನ ವೈಷಮ್ಯದ ಹಿನ್ನೆಲೆ ಪ್ರತಿಷ್ಠಿತ ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿನ ಕೋಟಿಲಿಂಗ ದೇವಸ್ಥಾನದಲ್ಲಿ ನೀಡಲಾಗುತ್ತಿದ್ದ ಅನ್ನಸಂತರ್ಪಣೆಗೆ ಜಿಲ್ಲಾಡಳಿತದಿಂದ ಬ್ರೇಕ್ ಹಾಕಲಾಗಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿದಂತೆ ಮೃತ ಸಾಂಬಶಿವಮೂರ್ತಿ ಮಗ ಶಿವಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿದ್ದ ಕುಮಾರಿ ಅವರ ನಡುವಿನ ವ್ಯಾಜ್ಯ ನ್ಯಾಯಾಲಯ ಮೆಟ್ಟಿಲೇರಿತ್ತು. ಈ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಕೋಟಿಲಿಂಗ ದೇವಾಲಯವನ್ನ ಸರ್ಕಾರದ ವಶಕ್ಕೆ ಪಡೆದಿರುವ ಜಿಲ್ಲಾಡಳಿತ, ಮುಂಜಾಗೃತ ಕ್ರಮವಾಗಿ ಅನ್ನಸಂತರ್ಪಣೆಗೆ ತಡೆ ನೀಡಿದೆ. ಅಲ್ಲದೆ ಸುಳ್ವಾಡಿ ಚಿಂತಾಮಣಿ ದೇವಾಲಯದಲ್ಲಿ ನಡೆದ ಪ್ರಸಾದ ದುರಂತವನ್ನ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.