ಕರ್ನಾಟಕ

karnataka

ETV Bharat / state

ಕೋಲಾರದ ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ - ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಕೋಲಾರದ ಲಕ್ಷ್ಮಿಸಾಗರ ಕೆರೆ ಬಳಿ ಕೆ ಸಿ ವ್ಯಾಲಿಯ ನೀರಿನಲ್ಲಿ ನೊರೆ ಕಾಣಿಸಿಕೊಂಡಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕೆಸಿ ವ್ಯಾಲಿಯ ನೀರಿನ ಸಂಪ್​ಗೆ ಬಾಗಿಲು ಹಾಕಿಸಿದ್ದಾರೆ.

Foam in the water of KC Valley of Kolar
ಕೋಲಾರದ ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ

By

Published : Jul 20, 2022, 3:28 PM IST

Updated : Jul 20, 2022, 6:40 PM IST

ಕೋಲಾರ:ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ನೀರು ಹರಿಸುವ ಕೆ.ಸಿ.ವ್ಯಾಲಿ ಯೋಜನೆಯ ನೀರಿನಲ್ಲಿ ನೊರೆ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಕೋಲಾರ ತಾಲೂಕಿನ ಲಕ್ಷ್ಮಿಸಾಗರ ಕೆರೆಯ ಬಳಿ ನೊರೆ ಕಂಡು ಬಂದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರದ ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ

ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುವ ನೀರಿನಲ್ಲಿ ನೊರೆ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅಲ್ಲದೇ ಬೆಳ್ಳಂದೂರು ಬಳಿ ನೀರಿನ ಸಂಪ್ ಹತ್ತಿರ ಸ್ಥಳೀಯರು ಬಟ್ಟೆ ತೊಳೆಯುತ್ತಿರುವುದರಿಂದ ನೊರೆ ಉಂಟಾಗಿದೆ. ಕೂಡಲೇ ಅಧಿಕಾರಿಗಳು ಸಂಪ್​ಗೆ ಬಾಗಿಲು‌ ಹಾಕಿಸಿದ್ದಾರೆ. ಇತ್ತೀಚೆಗಷ್ಟೆ ಮೂರು ಬಾರಿ ಕೆ.ಸಿ.ವ್ಯಾಲಿ ನೀರನ್ನ ಸಂಸ್ಕರಿಸಬೇಕೆಂದು ಒತ್ತಾಯಿಸಿ, ಹಲವಾರು ಸಂಘಟನೆಯವರು ಪ್ರತಿಭಟ‌ನೆ ನಡೆಸಿದ್ರು.

ಇದನ್ನೂ ಓದಿ:ಏಳು ವರ್ಷದ ಹಿಂದಿನ ಕೇಸ್​ಗೆ ಮರುಜೀವ.. ಈಗ ಶವಕ್ಕಾಗಿ ಕೆರೆ ನೀರನ್ನೇ ಖಾಲಿ ಮಾಡುತ್ತಿರುವ ಪೊಲೀಸರು!

Last Updated : Jul 20, 2022, 6:40 PM IST

ABOUT THE AUTHOR

...view details