ಕೋಲಾರ:ಆ್ಯಂಬುಲೆನ್ಸ್ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಕ್ಕೆ ಮುಜುಗರವಾದ ಕಾರಣ ಒಂದೇ ಬೈಕ್‍ನಲ್ಲಿ ಐವರು ಕ್ವಾರಂಟೈನ್ ಕೇಂದ್ರಕ್ಕೆ ಪ್ರಯಾಣ ಬೆಳೆಸಿರುವ ಫೋಟೋ ವೈರಲ್ ಆಗಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬುರಕಾಯಲಕೋಟೆ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಚಲ್ದಿಗಾನಹಳ್ಳಿ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಲಕ್ಷ್ಮೀಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದ ಕುಟುಂಬಸ್ಥರಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಆ್ಯಂಬುಲೆನ್ಸ್ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಕ್ಕೆ ಮುಜುಗರವಾಗುತ್ತದೆ ಎಂದು ಬೈಕ್ನಲ್ಲೇ ತೆರಳಿದ್ದಾರೆ.