ಕರ್ನಾಟಕ

karnataka

ETV Bharat / state

ಕೋಲಾರ: ಮಳೆಯಿಂದಾಗಿ ಐದು ಕೋಟಿಗೂ ಹೆಚ್ಚು ಮೌಲ್ಯದ ಬೆಳೆಹಾನಿ - Etv Bharat Kannada

ಕೋಲಾರದಲ್ಲಿ ನಿರಂತರ ಮಳೆ ಸುರಿದಿದ್ದರಿಂದ 1,036 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿನ ವಿವಿದ ಬೆಳೆಗಳು ಹಾನಿಯಾಗಿವೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

KN_KLR_5
ಕೋಲಾರದಲ್ಲಿ ಮಳೆಗೆ ಬೆಳೆ ಹಾನಿ

By

Published : Sep 20, 2022, 2:35 PM IST

ಕೋಲಾರ: ಜಿಲ್ಲೆಯಾದ್ಯಂತ ನಿರಂತರ ಸುರಿದ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ, ಬೀಟ್​ ರೋಟ್​, ಕ್ಯಾರೆಟ್​, ಹೂಕೋಸು, ಎಲೆ ಕೋಸು, ಸೇರಿದಂತೆ ಹೂವು ಬೆಳೆಗಳು ಹಾನಿಯಾಗಿವೆ. ಇನ್ನು ಬೆಳೆ ಕಳೆದುಕೊಂಡಿರುವ ರೈತರು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ಕೂಡಾ ಮಾಡುವ ಕೆಲಸ ಪ್ರಗತಿಯಲ್ಲಿದ್ದು ಈಗಾಗಲೇ ಅಧಿಕಾರಿಗಳು ಲೆಕ್ಕಾಚಾರದ ಪ್ರಕಾರ 1,036 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಯಾಗಿವೆ. ಪರಿಹಾರ ಪೋರ್ಟಲ್​ನಲ್ಲಿ ಈಗಾಗಲೇ ಹಾನಿಯಾದ ಬೆಳೆಗಳನ್ನು ದಾಖಲು ಮಾಡಲಾಗುತ್ತಿದೆ.

ಇನ್ನು ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 5.8 ಕೋಟಿ ರೂಪಾಯಿಗೂ ಹೆಚ್ಚಿನ ವಿವಿಧ ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಮಳೆಯಿಂದ ಬೆಳೆ ಹಾನಿ: ರಾಜಧಾನಿಯಲ್ಲಿ ಸೊಪ್ಪು ತರಕಾರಿ ದರದಲ್ಲಿ ಭಾರಿ ಹೆಚ್ಚಳ

ABOUT THE AUTHOR

...view details