ಕರ್ನಾಟಕ

karnataka

ETV Bharat / state

ಕೊರೊನಾ ನಿಯಮ ಉಲ್ಲಂಘನೆ ಆರೋಪ: ಮಾಜಿ ಸಚಿವ ವರ್ತೂರು​ ಪ್ರಕಾಶ್ ವಿರುದ್ಧ ಎಫ್​ಐಆರ್​ - ವರ್ತೂರು​ ಪ್ರಕಾಶ್ ,

ಜಿಲ್ಲಾ ಪಂಚಾಯತ್​ ಮತ್ತು ತಾಲೂಕು ಪಂಚಾಯತ್​ ಚುನಾವಣೆ ಹಿನ್ನೆಲೆ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಕೊರೊನಾ ನಿಯಮ ಉಲ್ಲಂಘಿಸಿರುವ ಆರೋಪದಡಿ ಮಾಜಿ ಸಚಿವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

fir-registered-against-varthur-prakash-for-violation-of-covid-norms
ಮಾಜಿ ಸಚಿವ ವರ್ತೂರ್​ ಪ್ರಕಾಶ್ ವಿರುದ್ಧ ಎಫ್​ಐಆರ್​

By

Published : Aug 3, 2021, 3:00 PM IST

ಕೋಲಾರ: ಜಿಲ್ಲಾ ಪಂಚಾಯತ್​​​​ ಹಾಗೂ ತಾಲೂಕು ಪಂಚಾಯತ್​ಗಳ ಚುನಾವಣೆ ದಿನಾಂಕ ಮುಂದೂಡಿದ್ದರೂ,‌‌ ಕೋಲಾರದಲ್ಲಿ ಮಾತ್ರ ಚುನಾವಣ ಕಣ ರಂಗೇರಿದೆ. ಈ ಮೂಲಕ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಕ್ರಮ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಕೋಲಾರ ಹೊರವಲಯದ ಚೊಕ್ಕ ಕನ್ವೆನ್ಷನ್ ಹಾಲ್‌ನಲ್ಲಿ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ನೇತೃತ್ವದಲ್ಲಿ, ನರಸಾಪುರ ಜಿಲ್ಲಾ‌ ಪಂಚಾಯತ್​ ಚುನಾವಣಾ ಸಂಬಂಧ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಸಭೆಗೆ ಹಾಜರಾದವರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಸಹ ಮಾಡಿದ್ದರು ಎನ್ನಲಾಗ್ತಿದೆ.

ಈ ವೇಳೆ ಸಭೆಯಲ್ಲಿ ಕಾರ್ಯಕರ್ತರು ಸೇರಿದಂತೆ ಮಾಜಿ ಸಚಿವರು ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ, ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ, ನಿಯಮಗಳ ಉಲ್ಲಂಘಿಸಿದ್ದರು. ಈ ಹಿ‌ನ್ನೆಲೆ ಕೋಲಾರ‌ ನಗರ ಠಾಣೆಯಲ್ಲಿ ವರ್ತೂರು ಪ್ರಕಾಶ್ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆ ಆರೋಪದಡಿ ಎಫ್​ಐಆರ್ ​​ದಾಖಲಾಗಿದೆ.

ಓದಿ:ಬೆಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಕೇಸ್‌: ಬಂಧಿತ ಆಫ್ರಿಕನ್ ಪ್ರಜೆಯಿಂದ ಡ್ರಗ್ಸ್ ಸೇವನೆ ಸಾಬೀತು

ABOUT THE AUTHOR

...view details