ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಕರ ಸ್ಥಾನಕ್ಕೆ ಮತದಾನದ ಪ್ರಕ್ರಿಯೆ ನಡೆಯಿತು. ಈ ವೇಳೆ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ನಡುವೆ ಮಾರಾಮಾರಿ ನಡೆಯಿತು.
ಮಾಲೂರು ಶಾಸಕ ಕೆ. ವೈ ನಂಜೇಗೌಡ ಸಹ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದು, ತಮ್ಮ ಪರ ಇರುವ ಮತದಾರರನ್ನು ರೆಸಾರ್ಟ್ನಿಂದ ನೇರವಾಗಿ ಮತಕೇಂದ್ರದ ಸ್ಥಳಕ್ಕೆ ಎರಡು ಬಸ್ಗಳಲ್ಲಿ ಕರೆದುಕೊಂಡು ಬಂದರು. ಈ ವೇಳೆ ಮಾಲೂರಿನ ಜೆಡಿಎಸ್ ಮಾಜಿ ಶಾಸಕ ಮಂಜುನಾಥಗೌಡ ಬೆಂಬಲಿಗರೂ ಕುಕ್ಕರ್ ಗುರುತಿಗೆ ಮತ ಎಂದು ಅಣಕಿಸಿ ಕಾಲೆಳೆದರು. ಇದಕ್ಕೆ ಕೆಂಡಾಮಂಡಲರಾದ ಶಾಸಕ ನಂಜೇಗೌಡ ಕಡೆಯವರು ಹಾಗೂ ವಿರೋಧಿ ಬಣಕ್ಕೆ ಮಾರಾಮಾರಿ ಶುರುವಾಗಿಬಿಟ್ಟಿತು. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.