ಕರ್ನಾಟಕ

karnataka

ETV Bharat / state

ಕೋಲಾರ: ತಂದೆಯನ್ನೇ ಕೊಂದ ಮಗನ ಬಂಧನ - ಕೋಲಾರದಲ್ಲಿ ತಂದೆ ಕೊಂದಿದ್ದ ಆರೋಪಿ ಬಂಧನ,

ಅವರಿಬ್ಬರದ್ದು ಎರಡನೇ ಮದುವೆ. ಕುಡಿತದ ಚಟಕ್ಕೆ ಗಂಡ ದಾಸನಾಗಿದ್ದ. ಹೀಗೆ ದಾರಿ ತಪ್ಪಿದ್ದ ಸಂಸಾರವನ್ನು ಸರಿಯಾಗಿ ಮುನ್ನಡೆಸದ ಮನೆಯ ಯಜಮಾನನ್ನು ಮಲಮಗನೇ ಕೊಂದು ಹಾಕಿದ್ದಾನೆ.

Father killed accused arrest, Father killed accused arrest in Kolar, Kolar crime news, ತಂದೆ ಕೊಂದಿದ್ದ ಆರೋಪಿ ಬಂಧನ, ಕೋಲಾರದಲ್ಲಿ ತಂದೆ ಕೊಂದಿದ್ದ ಆರೋಪಿ ಬಂಧನ, ಕೋಲಾರ ಅಪರಾಧ ಸುದ್ದಿ,
ತಂದೆಯನ್ನೇ ಕೊಂದ ಮಗನನ್ನು ಬಂಧಿಸಿದ ಪೊಲೀಸರು

By

Published : Mar 19, 2021, 2:44 PM IST

ಕೋಲಾರ:ತನ್ನ ತಾಯಿಗೆ ಕುಡಿದು ಬಂದು ಹೊಡೆಯುತ್ತಾನೆ ಅನ್ನೋ ಕಾರಣಕ್ಕೆ ತಂದೆಯನ್ನು ಮಗ ಹತ್ಯೆಗೈದಿರುವ ಘಟನೆ ಕೆಜಿಎಫ್​ ನಗರದ ಪಾರಾಂಡಹಳ್ಳಿಯಲ್ಲಿ ನಡೆದಿದೆ.

ಪಾರಾಂಡಹಳ್ಳಿಯ ನಿವಾಸಿ ಲಕ್ಷ್ಮಿಯನ್ನು ಆಕೆಯ ಮೊದಲ ಗಂಡ ಬಿಟ್ಟು ಹೋಗಿದ್ದ. ತನ್ನೆರಡು ಮಕ್ಕಳನ್ನು ಕಟ್ಟಿಕೊಂಡು ಸಂಕಷ್ಟ ಅನುಭವಿಸುತ್ತಿದ್ದ ಆಕೆಯನ್ನು ಕಳೆದ ಹದಿನೈದು ವರ್ಷಗಳ ಹಿಂದೆ ಪ್ರಭುರಾಜ್ ಎನ್ನುವಾತ ಎರಡನೇ ಮದುವೆ ಮಾಡಿಕೊಂಡಿದ್ದ. ಪೇಂಟರ್​ ಕೆಲಸ ಮಾಡಿಕೊಂಡಿದ್ದ ಪ್ರಭುರಾಜ್ ಹಾಗೂ ಲಕ್ಷ್ಮಿ ಜೊತೆ ಸುಖಜೀವನ ನಡೆಯುತ್ತಿತ್ತು.

ಮೊದಲ ಗಂಡನ ಎರಡು ಮಕ್ಕಳ ಜೊತೆಗೆ ಪ್ರಭುರಾಜ್​ ಹಾಗೂ ಲಕ್ಷ್ಮಿಗೆ ಮತ್ತಿಬ್ಬರು ಮಕ್ಕಳಾಗಿದ್ದವು. ಇತ್ತೀಚೆಗೆ ಪ್ರಭುರಾಜ್​ ಮಕ್ಕಳ ಎದುರೇ ಕುಡಿದ ಮತ್ತಿನಲ್ಲಿ ಹಿಗ್ಗಾಮುಗ್ಗಾ ಥಳಿಸುತ್ತಿದ್ದನು. ಅಲ್ಲದೆ ಪ್ರಭುರಾಜ್​ ತನ್ನ ಪತ್ನಿ ಲಕ್ಷ್ಮೀ ಮೇಲೆ ಅನುಮಾನ ಪಡಲು ಶುರುಮಾಡಿಕೊಂಡಿದ್ದನು.

ಪ್ರಭುರಾಜ್​ ತಾಯಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಮೊದಲ ಗಂಡನ ಮಗ ಕಾರ್ತಿಕ್ ಸಹಿಸುತ್ತಿರಲಿಲ್ಲ. ಹೀಗಾಗಿ ಎರಡ್ಮೂರು ಬಾರಿ ಪ್ರಭುರಾಜ್​ಗೆ ಕಾರ್ತಿಕ್​ ಎಚ್ಚೆರಿಕೆ ನೀಡಿದ್ದನು. ಆದ್ರೂ ಸಹ ಪ್ರಭುರಾಜ್​ ಲಕ್ಷ್ಮಿ ಮೇಲೆ ಹಲ್ಲೆ ಮುಂದುವರಿಸಿದ್ದನು.

ಫೆಬ್ರುವರಿ 14 ರಂದು ಬೆಳಿಗ್ಗೆ ಕಾರ್ತಿಕ್​ ಮನೆಯಲ್ಲಿದ್ದಾಗಲೇ ಬಂದ ಪ್ರಭುರಾಜ್​ ಲಕ್ಷ್ಮಿಯನ್ನು ಮನಸೋಇಚ್ಛೆ ಹೊಡೆದಿದ್ದಾನೆ. ಇದನ್ನು ಕಣ್ಣಾರೆ ಕಂಡಿದ್ದ ಕಾರ್ತಿಕ್​​ ರಾತ್ರಿ ವೇಳೆಗೆ ತನ್ನ ಮಾವ ಸೂರ್ಯನನ್ನು ಜೊತೆಗೂಡಿ ತಂದೆ ಪ್ರಭುರಾಜ್​ನನ್ನು ಪಾರಂಡಹಳ್ಳಿಯ ಮೋರಿಯ ಬಳಿ ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ಮೂರು ಜನರೂ ಕುಡಿದಿದ್ದಾರೆ. ನಂತರ ಸೂರ್ಯನೊಂದಿಗೆ ಸೇರಿ ಕಾರ್ತಿಕ್​ ತನ್ನ ತಂದೆಯ ಕುತ್ತಿಗೆಯನ್ನು ಕೋಳಿಯಂತೆ ಕತ್ತು ಕೊಯ್ದು ಕೊಲೆ ಮಾಡಿ ಏನೂ ತಿಳಿಯದಂತೆ ಸುಮ್ಮನಾಗಿದ್ದ.

ಮರುದಿನ ಪ್ರಭುರಾಜ್​ ಶವ ಮೋರಿಬಳಿ ಪತ್ತೆಯಾಗಿತ್ತು. ಈ ವೇಳೆ ತನಿಖೆ ನಡೆಸಿದ ರಾಬರ್ಟ್​ಸನ್​ ಪೇಟೆ ಪೊಲೀಸರಿಗೆ ಕಾರ್ತಿಕ್​ ಸಿಕ್ಕಿಬಿದ್ದಿದ್ದಾನೆ. ಸದ್ಯ ಕಾರ್ತಿಕ್​ನನ್ನು ಬಂಧಿಸಿರುವ ಪೊಲೀಸರು ಮತ್ತೊಬ್ಬ ಆರೋಪಿ ಸೂರ್ಯನಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details