ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿ ಕೈ ಕತ್ತರಿಸಿದ ಪತಿರಾಯ - ಕೋಲಾರದಲ್ಲಿ ಪತಿಯಿಂದ ಪತ್ನಿ ಮೇಲೆ ಹಲ್ಲೆ

ಭೀಮಾರಾವ್ ಹಾಗೂ ಶಾಂತಾಬಾಯಿಗೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಮದುವೆಯಾದಾಗಿನಿಂದಲೂ ಹಿಂದೂಪುರದಲ್ಲಿ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ..

Fatal assault on wife by husband
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಂತಾಭಾಯಿ

By

Published : Sep 8, 2020, 4:35 PM IST

ಕೋಲಾರ : ಕುಡಿದ ಮತ್ತಿನಲ್ಲಿ ಹೆಂಡತಿಯೊಂದಿಗೆ ಜಗಳ ಮಾಡಿದ ಪತಿರಾಯ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈಯನ್ನೇ ಕತ್ತರಿಸಿದ ಘಟನೆ ಬಂಗಾರಪೇಟೆ ತಾಲೂಕಿನ ಕನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭೀಮಾರಾವ್ (35) ಎಂಬಾತ ಪತ್ನಿ ಶಾಂತಾಬಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಭೀಮರಾವ್​, ಪತ್ನಿಯೊಂದಿಗೆ ಜಗಳವಾಡಿ ಮನೆಯಿಂದ ಹೊರ ಹೋಗಿದ್ದ. ಸ್ವಲ್ಪ ಹೊತ್ತಿನ ಬಳಿಕ ವಾಪಸ್​ ಬಂದವ, ನೇರ ಹೆಂಡತಿಯಿದ್ದ ಕೋಣೆಗೆ ಹೋಗಿ ಆಕೆಯ ಬಾಯಿಗೆ ಬಟ್ಟೆ ತುರುಕಿ, ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ಶಾಂತಾಭಾಯಿಯ ಬಲಗೈ ಅರ್ಧ ತುಂಡಾಗಿದೆ. ಬಾಯಿಗೆ ಬಟ್ಟೆ ತುರುಕಿದ್ದರಿಂದ ಕಿರುಚಿಕೊಳ್ಳಲಾಗದೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಶಾಂತಾಬಾಯಿ ರೂಮಿನಿಂದ ಹೊರ ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾಳೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಂತಾಬಾಯಿ

ಭೀಮಾರಾವ್ ಹಾಗೂ ಶಾಂತಾಬಾಯಿಗೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಮದುವೆಯಾದಾಗಿನಿಂದಲೂ ಹಿಂದೂಪುರದಲ್ಲಿ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ.

ಲಾಕ್‌ಡೌ‌ನ್ ವೇಳೆ ಊರಿಗೆ ಹಿಂತಿರುಗಿದ್ದರು. ಮನೆಗೆ ಬಂದ ಬಳಿಕ ಶಾಂತಾಬಾಯಿ ಕೂಲಿ ಮಾಡಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದರು. ಇತ್ತ ಗಂಡ ನಿತ್ಯ ಕುಡಿದು ಬಂದು ಹೆಂಡತಿಯ ಮೇಲೆ ಅನುಮಾನ ಪಟ್ಟು ಕ್ಯಾತೆ ತೆಗೆಯುತ್ತಿದ್ದ ಎನ್ನಲಾಗಿದೆ.

ಆರೋಪಿ ಭೀಮಾರಾವ್

ಈ ಹಿಂದೆಯೂ ಭೀಮರಾವ್​ ನಡು ರಸ್ತೆಯಲ್ಲಿ ಹೆಂಡತಿಯ ಮೇಲೆ ಹಲ್ಲೆ ಮಾಡಿ, ಅಕೆಯ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿ ಇಡಲು ಪ್ರಯತ್ನಿಸಿದ್ದ. ಈ ವೇಳೆ ಊರಿನ ಹಿರಿಯರು ಬುದ್ಧಿ ಹೇಳಿದ್ದರು. ಪತ್ನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಭೀಮರಾವ್​ನನ್ನು ಬಂಧಿಸುವಲ್ಲಿ ಕಾಮಸಮುದ್ರ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details