ಕೋಲಾರ: ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೋಲಾರ ತಾಲೂಕಿನ ಶಿಳ್ಳಂಗೆರೆ ಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ, ಎಮ್ಮೆ ಹಾಗೂ ಕುರಿಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿಲ್ಲಿಸಿ ಪ್ರತಿಭಟನೆ ನಡೆಸಿದ ರೈತರು, ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ರು.
ಕೆರೆ ಒತ್ತುವರಿ ತೆರವುಗೊಳಿಸಲು ಪ್ರತಿಭಟನೆ: ರೈತರು ಹಾಗೂ ಒತ್ತುವರಿದಾರರ ನಡುವೆ ಗಲಾಟೆ - ಕೋಲಾರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇನ್ನು ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಒತ್ತುವರಿದಾದರರು ಹಾಗೂ ರೈತರ ನಡುವೆ ಗಲಾಟೆ ಉಂಟಾಯಿತು. ರೈತ ಮಹಿಳೆ ಲಕ್ಷ್ಮಮ್ಮ ಹಾಗೂ ಒತ್ತುವರಿದಾರ ಶಿವಣ್ಣ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಕೆರೆ ಒತ್ತುವರಿ ಜಾಗದ ಸುತ್ತಮುತ್ತ ಔಷಧಿ ಸಿಂಪಡಿಸಿದ ಕಳೆಯನ್ನು ತಿಂದು ಗ್ರಾಮದಲ್ಲಿ, ಮೂರು ತಿಂಗಳಿಂದ ಸುಮಾರು 60 ಕ್ಕೂ ಹೆಚ್ಚು ಕುರಿ, ಮೇಕೆ, ಎಮ್ಮೆ ಹಾಗೂ ಹಸಗಳು ಸರಣಿ ಸಾವನ್ನಪ್ಪಿವೆ ಎಂದು ರೈತರು ಆರೋಪಿಸಿದರು.
ಇನ್ನು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಬಂದು, ಮನವಿ ಸ್ವೀಕರಿಸಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ರು. ಇನ್ನು ಇದೆ ವೇಳೆ ಒತ್ತುವರಿದಾರರ ಮೇಲೆ ಕಾನೂನು ರೀತಿಯ ಕ್ರಮ ವಹಿಸಬೇಕೆಂದು ರೈತರು ಒತ್ತಾಯ ಮಾಡಿದ್ರು.