ಕರ್ನಾಟಕ

karnataka

ETV Bharat / state

ಬೆಳೆ ಹಾನಿ ತಡೆಯಲಾಗದ ಡಿಎಫ್‌ಒ ದಾಳಿ ಮಾಡುವ ಆನೆಗಳ ಬಣ್ಣ, ಗುರುತಿನ ಚೀಟಿ ಕೇಳ್ತಾರಂತೆ..

ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಂಗಾರಪೇಟೆ ಸೇರಿ ಮಾಲೂರು ಗಡಿಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳನ್ನ ನಾಶಪಡಿಸುತ್ತಿದ್ದರೂ ಸರ್ಕಾರ ಮಾತ್ರ ರೈತರಿಗೆ ಈವರೆಗೂ ಪರಿಹಾರ ಘೋಷಣೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Farmers protest against forest department in kolar
ಅರಣ್ಯ ಇಲಾಖೆ ವಿರುದ್ಧ ರಾಜ್ಯ ರೈತ ಸಂಘ ಪ್ರತಿಭಟನೆ

By

Published : Mar 14, 2020, 12:00 AM IST

ಕೋಲಾರ: ಜಿಲ್ಲೆಯ ಗಡಿಭಾಗಗಳಲ್ಲಿ ಕಾಡಾನೆ ಹಾವಳಿಯಿಂದ ರೈತರ ಬೆಳೆಗಳನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಅರಣ್ಯ ಇಲಾಖೆ ವಿರುದ್ಧ ರಾಜ್ಯ ರೈತ ಸಂಘದಿಂದ ಪ್ರತಿಭಟನೆ..

ಕೋಲಾರ ನಗರದ ಮೆಕ್ಕೆ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕಾಡು ಪ್ರಾಣಿಗಳ ಬೊಂಬೆಗಳನ್ನಿಟ್ಟು ಅಣುಕು ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ರು. ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಂಗಾರಪೇಟೆ ಸೇರಿ ಮಾಲೂರು ಗಡಿಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳನ್ನ ನಾಶಪಡಿಸುತ್ತಿದ್ದರೂ ಸರ್ಕಾರ ಮಾತ್ರ ರೈತರಿಗೆ ಈವರೆಗೂ ಪರಿಹಾರ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದ್ರು.

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹಾಗೂ ಡಿಎಫ್‌ಒ ಚಕ್ರಪಾಣಿ ಅವರ ಭಾವಚಿತ್ರದ ಮಾಸ್ಕ್​ಗಳನ್ನು ಹಾಕಿಕೊಂಡು ಅಣುಕು ಪ್ರದರ್ಶನ ಮಾಡಿದ್ರು. ಅಲ್ಲದೆ ಪರಿಹಾರ ಕೇಳಲು ಹೋದ ರೈತರಿಗೆ ಡಿಎಫ್‌ಒ ಚಕ್ರಪಾಣಿ, ಗುರುತಿನ ಚೀಟಿ ಕೇಳುವುದರೊಂದಿಗೆ ಆನೆಗಳ ಬಣ್ಣ ಹೇಗಿತ್ತು ಎಂದು ಪ್ರಶ್ನೆ ಮಾಡುತ್ತಾರೆಂದು ದೂರಿದ್ರು. ಹೀಗಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡುವುದರೊಂದಿಗೆ ಕಾಡುಪ್ರಾಣಿಗಳಿಂದ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದ್ರು.

ABOUT THE AUTHOR

...view details