ಕೋಲಾರ:ಬರದ ನಾಡಿನಲ್ಲಿ ಬಂಗಾರದ ಭತ್ತದ ಬೆಳೆ ಬೆಳೆಯುವ ದಿನಗಳು ಆರಂಭವಾಗಿವೆ. ಉತ್ತಮ ಮಳೆ ಜಿಲ್ಲೆಯ ಕರೆಯೊಡಲು ತುಂಬಿಸಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮುಳಬಾಗಿಲು ತಾಲ್ಲೂಕಿನ ಉತ್ತನೂರು ಗ್ರಾಮದಲ್ಲಿ ಭತ್ತದ ಪೈರುಗಳು ನಳನಳಿಸುತ್ತಿವೆ. ನೀರಿನ ಸಮಸ್ಯೆಯಿಂದ ಜಿಲ್ಲಾಡಳಿತ ಭತ್ತ ಬೆಳೆಯದಂತೆ ನಿರ್ಬಂಧಿಸಿತ್ತು. ಆದರೆ ಮಳೆರಾಯ ಕೃಪೆದೋರಿದ ಪರಿಣಾಮ ರೈತರು ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಬೆಳೆ ಬೆಳೆಯುತ್ತಿದ್ದಾರೆ.
ಕಳೆದ ಎರಡು ದಶಕಗಳ ಹಿಂದೆ ರೈತರು ರಾಗಿ ಬೆಳೆಯಲಾಗದೇ ನಿಲಗಿರಿ ಹಾಕಿ ಊರು ಬಿಟ್ಟು ಹೋಗಿದ್ದರು. ಆದರೆ ಈ ವರ್ಷ ಕೆರೆ ಕಟ್ಟೆಗಳೆಲ್ಲಾ ತುಂಬಿದ್ದು ಅನ್ನದಾತರು ಮತ್ತೆ ತಮ್ಮ ಕನಸಿನ ಬೆಳೆ ಬೆಳೆಯಲು ಶುರು ಮಾಡಿದ್ದಾರೆ.
ನೀರಿಲ್ಲದೆ ವ್ಯವಸಾಯ ಮಾಡೋದು ಅಸಾಧ್ಯವೆಂದು ನಗರಗಳತ್ತ ಕೆಲಸಕ್ಕೆ ಹೋಗಿದ್ದ ನೂರಾರು ರೈತರು ಮತ್ತು ಅವರ ಮಕ್ಕಳು ಮತ್ತೆ ತಮ್ಮೂರಿಗೆ ವಾಪಸ್ಸಾಗಿದ್ದಾರೆ. ಹೀಗೆ ಬಂದವರು ತಮ್ಮ ಭೂಮಿಗಳಲ್ಲಿ ಕೃಷಿ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಅದೆಷ್ಟೋ ವರ್ಷಗಳ ನಂತರ ತಮ್ಮೂರಿನ ಭತ್ತದ ಗದ್ದೆಗಳಲ್ಲಿ ಬೆಳೆ ನೋಡದ ಯುವಕರು ಹಸಿರ ಸಿರಿ ನೋಡಿ ಖುಷಿಯಾಗಿದ್ದಾರೆ.
ಇದನ್ನೂ ಓದಿ:ಶಾಲೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ : ಸಮಿತಿ ರಚಿಸಿ, ಶಿಕ್ಷಣ ತಜ್ಞರ ಜತೆ ಚರ್ಚಿಸಿ ನಿರ್ಧಾರ ಎಂದ ಸಚಿವ ನಾಗೇಶ್