ಕೋಲಾರ: ಮೂರು ನಾಯಿಗಳು ಕೃಷಿ ಹೊಂಡದಲ್ಲಿ ಬಿದ್ದು, ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ದೃಶ್ಯ ನೋಡಿದ ರೈತ ಮಹಿಳೆಯೋರ್ವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕೃಷಿಹೊಂಡಕ್ಕೆ ಬಿದ್ದ ಬೀದಿನಾಯಿಗಳು: ರಕ್ಷಿಸಿ ಮಾನವೀಯತೆ ಮೆರೆದ ರೈತ ಮಹಿಳೆ - kolar latest news
ಗ್ರಾಮದ ಮಂಜುನಾಥ್ ಗೌಡ ಎಂಬುವವರಿಗೆ ಸೇರಿರುವ ಕೃಷಿ ಹೊಂಡಕ್ಕೆ ರಾತ್ರಿ ವೇಳೆ ಕಣ್ತಪ್ಪಿ, ಕಾಲು ಜಾರಿ ಮೂರು ನಾಯಿಗಳು ಬಿದ್ದಿವೆ. ಅಲ್ಲದೆ ಕೃಷಿ ಹೊಂಡಕ್ಕೆಹಾಕಿದ್ದ ಟಾರ್ಪಲ್ ಜಾರುತ್ತಿದರಿಂದ್ದ ಮೇಲೆ ಬರಲಾಗದೆ ನಾಯಿಗಳು ರಾತ್ರಿಯಿಡಿ ನರಳಾಡಿವೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಮಂಜುನಾಥ್ ಗೌಡ ಎಂಬುವವರಿಗೆ ಸೇರಿರುವ ಕೃಷಿ ಹೊಂಡಕ್ಕೆ ರಾತ್ರಿ ವೇಳೆ ಕಣ್ತಪ್ಪಿ, ಕಾಲು ಜಾರಿ ಮೂರು ನಾಯಿಗಳು ಬಿದ್ದಿವೆ. ಅಲ್ಲದೆ ಕೃಷಿ ಹೊಂಡಕ್ಕೆ ಹಾಕಿದ್ದ ಟಾರ್ಪಲ್ ಜಾರುತ್ತಿದರಿಂದ್ದ ಮೇಲೆ ಬರಲಾಗದೆ ನಾಯಿಗಳು ರಾತ್ರಿಯಿಡಿ ನರಳಾಡಿವೆ.
ಬೆಳಗ್ಗೆ ಎಂದಿನಂತೆ ತೋಟದ ಕೆಲಸಕ್ಕೆಂದು ಬಂದ ರೈತ ಮಹಿಳೆ ರತ್ನ ಎಂಬಾಕೆಗೆ ನಾಯಿಗಳ ನರಳಾಟದ ಕೂಗು ಕೇಳಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು, ಹನಿ ನೀರಾವರಿಗೆ ಬಳಸುವ ಡ್ರಿಪ್ ಪೈಪನ್ನು ಉಪಯೋಗಿಸಿಕೊಂಡು ಒಂದೊಂದಾಗಿ ನಾಯಿಗಳನ್ನು ಹೊರಗೆಳೆದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈತ ಮಹಿಳೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.