ಕೋಲಾರ: ಕೊರೊನಾ ಲಾಕ್ಡೌನ್ ಪರಿಣಾಮ ರೈತರಿಗೆ ನೇರವಾಗಿ ತಟ್ಟಿದೆ. ಒಂದೆಡೆ, ತಾವು ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಇಲ್ಲ, ಮತ್ತೊಂದೆಡೆ ಮಾರುಕಟ್ಟೆಯೂ ಇಲ್ಲದೆ ರೈತರು ಹೈರಾಣಾಗಿದ್ದಾರೆ.
ಕೋಲಾರ ತಾಲೂಕಿನ ಚೋಳಘಟ್ಟ ಗ್ರಾಮದ ಚಲಪತಿ ಎಂಬ ರೈತ ತನ್ನ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ ಬೆಳೆಯನ್ನು ತಾನೇ ನಾಶ ಮಾಡಿದ್ದಾನೆ. ಲಾಕ್ಡೌನ್ ಸಮಯದಲ್ಲಿ ಸಾಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ನೋವಿನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಬೆಳೆಯನ್ನು ಕಿತ್ತೆಸೆದಿದ್ದಾನೆ.