ಕೋಲಾರ: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಜರುಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕಾರಂಜಿಕಟ್ಟೆ ಬಡಾವಣೆ ನಿವಾಸಿಯಾದ ಬಾಬು (45) ಹಾಗೂ ಇವರ ಪತ್ನಿ ಪುಷ್ಪ (35) ಮಗಳು ಗಂಗೋತ್ರಿ (17) ಬಾಬು ತಂದೆ ಮುನಿಯಪ್ಪ (70) ಮತ್ತು ಆತನ ತಾಯಿ ನಾರಾಯಣಮ್ಮ (65) ಆತ್ಮಹತ್ಯೆಗೆ ಯತ್ನಿಸಿದವರು. ಐವರ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.