ಕರ್ನಾಟಕ

karnataka

ETV Bharat / state

ಇಂಧನ ಖಾತೆ ನಿಭಾಯಿಸಿದ ಅನುಭವ ಇದೆ, ಅದೇ ಕೊಟ್ರೆ ಒಳ್ಳೆಯದು: ಸಚಿವ ಹೆಚ್​. ನಾಗೇಶ್​ - bjp ministers

ಇಂಧನ ಖಾತೆ ನಿಭಾಯಿಸಿದ ಅನುಭವವಿದೆ. ಹಾಗಾಗಿ ಬಿಜೆಪಿಗೆ ಮನವಿ ಮಾಡಿದ್ದೇನೆ ಎಂದು ಹೆಚ್.ನಾಗೇಶ್ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಬೇಕಿರುವುದರಿಂದ ಕೆಲವು ಸಚಿವ ಸ್ಥಾನಗಳನ್ನು ಹಂಚಿಕ ಮಾಡಿಲ್ಲ ಎಂದರು.

ಸಚಿವ ಹೆಚ್.ನಾಗೇಶ್

By

Published : Aug 24, 2019, 7:02 PM IST

ಕೋಲಾರ: ಇಂಧನ ಖಾತೆ ನಿಭಾಯಿಸಿದ ಅನುಭವವಿದೆ. ಹಾಗಾಗಿ ನನಗೆ ಅದೇ ಖಾತೆ ನೀಡುವ ನಿರೀಕ್ಷೆ ಇದೆ ಎಂದು ನೂತನ ಸಚಿವ ಹೆಚ್.ನಾಗೇಶ್ ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಇಲ್ಲಿನ ಹೊರ ವಲಯದ ಬಿಜೆಪಿ ಕಚೇರಿಯಲ್ಲಿ ನಡೆದ ಅರುಣ್​ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮಾತನಾಡಿದರು.

ಸಚಿವ ಹೆಚ್.ನಾಗೇಶ್

14 ತಿಂಗಳು ಮೇಲ್ನೋಟಕ್ಕೆ ಸಮ್ಮಿಶ್ರ ಸರ್ಕಾರ ಚೆನ್ನಾಗಿ ಕಾಣುತ್ತಿತ್ತು. ಈಗ ಒಳ ಜಗಳ ಬಗಹಿರಂಗವಾಗಿದೆ. ನನಗೂ ಖಾತೆ ಕೊಡಲು ದಿನದೂಡುತ್ತಿದ್ದರು. ಈಗ ಬಿಜೆಪಿ ಜೊತೆ ನಾವಿದ್ದೇವೆ. ನಂತರ ಅನರ್ಹ ಶಾಸಕರು ಬರುತ್ತಾರೆ. ಅದಕ್ಕಾಗಿಯೇ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಿಲ್ಲ ಎಂದು ಹೇಳಿದರು.

ನಾವೆಲ್ಲ ಒಗ್ಗಟ್ಟಾಗಿಯೇ ಲೋಕಸಭೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನು ಸೋಲಿಸಿದ್ದು ಎಂದರು.

ABOUT THE AUTHOR

...view details