ಕೋಲಾರ :ಆರ್ಥಿಕ ಪ್ಯಾಕೇಜ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಾವಿರ, ಎರಡು ಸಾವಿರ ಹಾಗೂ ಮೂರು ಸಾವಿರ ಎಣಿಸುತ್ತೇನೆ. ಆದರೆ ಒಂದು ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಬರುತ್ತವೆ ಎನ್ನುವುದು ಗೊತ್ತಿಲ್ಲ ಎಂದರು.
ರಮೇಶ್ ಕುಮಾರ್ಗೆ 1 ಲಕ್ಷ ಕೋಟಿಗೆ ಎಷ್ಟು ಸೊನ್ನೆ ಗೊತ್ತಿಲ್ವಂತೆ! ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಒಂದು ಲಕ್ಷ ನನ್ನ ಕೈ ಗೆ ಬಂದರೆ ರಾತ್ರಿಯೆಲ್ಲ ಎಣಿಸುತ್ತೇನೆ. ನನ್ನ ಪರಿಸ್ಥಿತಿ ಅದು. ಲಕ್ಷ ಕೋಟಿ ಬಗ್ಗೆ ವ್ಯಾಖ್ಯಾನ ಮಾಡಿ ಎಂದರೆ ನನಗೆ ಚಂದ್ರಯಾನ ಹೇಗಿರುತ್ತೆ ಅಂತ ಕೇಳಿದಾಗ ಆಗುವ ಅನುಭವವಾಗುತ್ತದೆ ಎಂದು ಹೇಳಿದರು.
ಸರ್ಕಾರ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ. ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ. ನನಗಿಂತ ಆರ್ಥಿಕ ತಜ್ಞರು ಇದ್ದಾರೆ. ಅವರು ಮಾತನಾಡುತ್ತಾರೆ ಎಂದು ತಿಳಿಸಿದರು.
ನಾನು ಅಷ್ಟು ಮೇಧಾವಿ ಅಲ್ಲ. ಅಲ್ಲದೇ ನಮ್ಮ ಹಿರಿಯ ನಾಯಕರು ರಾಹುಲ್ ಗಾಂಧಿ ಅವರು ತಜ್ಞರ ಜೊತೆ ಚರ್ಚಿಸಿ ಹೇಳಿಕೆ ನೀಡಿರುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವಷ್ಟು ಶಕ್ತಿಯಿಲ್ಲ. ಯಾರಾದರೂ ಕಿಟ್ ಕೊಟ್ಟರೆ ನಾನು ತೆಗೆದುಕೊಳ್ಳುತ್ತೇನೆ ಎಂದರು.