ಕೋಲಾರ:ಯಡಿಯೂರಪ್ಪ ಅವರ ರಾಜೀನಾಮೆಯಿಂದ ಕಾಂಗ್ರೆಸ್ಗೆ ಯಾವ ನಷ್ಟವೂ ಆಗುವುದಿಲ್ಲ, ಒಳ್ಳೆಯದೂ ಆಗುವುದಿಲ್ಲ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್ಗೆ ಪ್ಲಸ್ಸೂ ಇಲ್ಲ, ಮೈನಸ್ಸೂ ಆಗಲ್ಲ. ಅಧಿಕಾರ ಹೋದಾಗ ಎಲ್ಲರಿಗೂ ಬೇಸರ ಆಗೋದು ಸಹಜ, ನಮಗೂ ನೋವಾಗುತ್ತೆ, ಅವ್ರಿಗೂ ನೋವಾಗಿದೆ ಎಂದರು.
ಪಕ್ಷ ಅವರಿಗೆ ಅವಕಾಶ ಕೊಟ್ಟಿತ್ತು ಅದರಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದ್ರು. ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿದೆ, ಒತ್ತಡ ಇರುತ್ತೆ ವಿಶ್ರಾಂತಿ ಬೇಕು. ಹಾಗಾಗಿ ಅಥವಾ ಪಕ್ಷದ ಸಿದ್ಧಾಂತಕ್ಕೆ ರಾಜೀನಾಮೆ ಸಲ್ಲಿಸಿದ್ದಾರೋ ಅದನ್ನು ಬಲ್ಲವರು ಯಾರು ಎಂದ್ರು. 40 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ, ಆರೋಗ್ಯವನ್ನ ಕಾಪಾಡಿಕೊಂಡು, ರಾಜಕೀಯ ಚಟುವಟಿಕೆಗಳಲ್ಲಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದ್ರು.
ಇನ್ನು ರಾಜ್ಯದಲ್ಲಿ ಕೆಲವು ವಲಸಿಗರು ಬಿಜೆಪಿ ಸಿದ್ಧಾಂತ ನಂಬಿ ಹೋದ್ರೋ ಇಲ್ಲ ಯಡಿಯೂರಪ್ಪ ಅವರ ಸಿದ್ಧಾಂತ ನಂಬಿ ಹೋದ್ರೋ ಅದು ನನಗೆ ಗೊತ್ತಿಲ್ಲ, ನನಗೆ ಈ ಬಗ್ಗೆ ಯಾರೂ ಏನೂ ಹೇಳಿಲ್ಲ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಯಡಿಯೂರಪ್ಪ ರಾಜೀನಾಮೆಗೆ ಮಠಾಧೀಶರ ವಿರೋಧ ಪ್ರಶ್ನೆಗೆ ಪ್ರತ್ರಿಕ್ರಿಯೆ ನೀಡಲು ನಿರಾಕರಿಸಿದರು.